* * * * * * HASSAN DISTRICT POLICE

Monday, March 5, 2018

PRESS NOTE : 02-03-2018


ಪತ್ರಿಕಾ ಪ್ರಕಟಣೆ         ದಿನಾಂಕ: 02-03-2018
ಮಗಳೊಂದಿಗೆ ತಾಯಿ ಕಾಣೆ
       ದಿನಾಂಕ: 21-02-2018 ರಂದು ಸಂಜೆ 06-00 ಗಂಟೆ ಸಮಯದಲ್ಲಿ ಹಾಸನ ಇಂದ್ರಾನಗರ ವಾಸಿ ಮಹೇಶ್ ರವರ ಪತ್ನಿ ಶ್ರೀಮತಿ ಮೇಘನಾ ತನ್ನ ಮಗಳೊಂದಿಗೆ ತಾಯಿ ಮನೆ ಆಲೂರು ತಾಲ್ಲೂಕು, ಪಾಳ್ಯ ಹೋಬಳಿ, ಸಿಂಗೋಡನಹಳ್ಳಿ ಗ್ರಾಮಕ್ಕೆ ಹೋಗಿ ವಾಪಸ್ ಹಾಸನ ಇಂದ್ರಾ ನಗರಕ್ಕೆ  ಹೋದವಳು ಮನೆಯಿಂದ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಮೇಘನಾ ರವರ ತಾಯಿ ಶ್ರೀಮತಿ  ವಿನೋದ ರವರು  ದಿನಾಂಕ: 01-03-2018 ರಂದು ಕೊಟ್ಟ ದೂರಿನ ಮೇರೆಗೆ  ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ಮೇಘನ ಕೋಂ ಮಹೇಶ, 24 ವರ್ಷ, 5'4'' ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾಳೆ. ಕಾಣೆಯಾದ ಮಗುವಿನ ಚಹರೆ: ವೀಣಾ ಬಿನ್ ಮಹೇಶ, 1 ವರ್ಷ, 8 ತಿಂಗಳು, ಕಾಣೆಯಾದವರ ಬಗ್ಗೆ ಸುಳಿವು ಸಿಕ್ಕಲ್ಲಿ ಹಾಸನ ಬಡಾವಣೆ ಠಾಣೆ ಫೋನ್ ನಂ. 08172-268967 ಕ್ಕೆ ಸಂಪರ್ಕಿಸುವುದು.

No comments: