* * * * * * HASSAN DISTRICT POLICE

Thursday, February 1, 2018

PRESS NOTE : 31-01-2018

ಪತ್ರಿಕಾ ಪ್ರಕಟಣೆ                                                       ದಿನಾಂಕ: 31-01-2018.

ಆಟೋರಿಕ್ಷಾ ಡಿಕ್ಕಿ ಪಾದಾಚಾರಿ ಸಾವು

      ದಿನಾಂಕ: 29-01-2018 ರಂದು ಸಂಜೆ 06-30 ಗಂಟೆ ಸಮಯದಲ್ಲಿ  ಹಾಸನ ನಗರ, ಜೈಲ್ ಹಿಂಭಾಗ ಶ್ರೀನಗರ, ವಾಡ್ನಂ. 34 ರ ವಾಸಿ ಇಮ್ರಾನ್ ರವರು ಏಜಾಸ್, ದಸ್ತಗೀರ್ ರವರುಗಳೊಂದಿಗೆ ಹಾಸನ ತಾಲ್ಲೂಕು, ಕಿತ್ತಾನೆ ಸಮೀಪವಿರುವ ಜಕ್ಕನಹಳ್ಳಿ ಹರಿಯಾಣ ಸ್ಟೀಲ್ ಪ್ಯಾಕ್ಟರಿ ಹತ್ತಿರ ಹಾಸನ ನಗರ ಸಭೆಯವರು ಕಸ ಸಂಗ್ರಹಣೆ ಮಾಡುವ ಜಾಗದಲ್ಲಿ ಗುಜುರಿ ಆರಿಸಲು ಹೋಗಿದ್ದು, ಗುಜುರಿ ಆರಿಸಿಕೊಂಡು  ವಾಪಸ್ ಹಾಸನಕ್ಕೆ ಹೋಗಲು ರಸ್ತೆಯ ಬದಿಯಲ್ಲಿ ನಿಂತು ಗುಜುರಿ ಸಾಮಾನುಗಳನ್ನು ತುಂಬಿಕೊಂಡು ಹೋಗಲು ವಾಹನ ಕಾಯುತ್ತಾ ನಿಂತಿದ್ದಾಗ ಜಕ್ಕನಹಳ್ಳಿ ಕಡೆಯಿಂದ ಹಾಸನ ಕಡೆಗೆ ಹೋಗಲು ಬರುತ್ತಿದ್ದ ಕೆಎ-13-ಎ-9414 ರ ಆಟೋರಿಕ್ಷಾ ಚಾಲಕ ತನ್ನ ಆಟೋವನ್ನು  ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ ರಸ್ತೆಯ ಮೇಲೆ ಬಿದ್ದು, ತೀವ್ರ ಸ್ವರೂಪದ ರಕ್ತಗಾಯಗಳಾಗಿ ಚಿಕಿತ್ಸೆಗಾಗಿ ಹಾಸನ ಸರ್ಕಾರಿ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸಿದ್ದು, ಪರೀಕ್ಷಿಸಿದ ವೈದ್ಯರು ಇಮ್ರಾನ್ ಬಿನ್ ಚಾಂದ್ಪಾಷ, 26 ವರ್ಷ ರವರು ಮೃತಪಟ್ಟಿರುತ್ತಾರೆಂದು ಪ್ರತ್ಯಕ್ಷದರ್ಶಿ ಶ್ರೀ ದಸ್ತಗೀರ್ ಟಿ.ಎ. ರವರು ಕೊಟ್ಟ ದೂರಿನ ಮೇರೆಗೆ ಗೊರೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.

ಜೂಜಾಡುತ್ತಿದ್ದ 6 ಜನರ ಬಂಧನ, ಬಂಧಿತರಿಂದ 2,225/- ನಗದು ವಶ


     ದಿನಾಂಕ: 30-01-2018 ರಂದು ರಾತ್ರಿ 08-45 ಗಂಟೆ ಸಮಯದಲ್ಲಿ ಹಾಸನ ನಗರ, ತನ್ವಿ ತ್ರಿಶಾ ಕಲ್ಯಾಣ ಮಂಟಪದ ಹತ್ತಿರ ಅಕ್ರಮವಾಗಿ ಹಣವನ್ನು ಪಣವಾಗಿ ಕಟ್ಟಿಕೊಂಡು ಅಂದರ್-ಬಾಹರ್ ಜೂಜಾಟ ಆಡುತ್ತಿದ್ದಾರೆಂದು ಪಿಎಸ್ಐ ಶ್ರೀ ಹರೀಶ್, ಕೆ.ಎನ್. ಹಾಸನ ಬಡಾವಣೆ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಅಮೃತ್ ಕುಮಾರ್ ಬಿನ್ ಲೆಟ್ ರಂಗಸ್ವಾಮಿ, 26 ವರ್ಷ, ಲಲಿತಮ್ಮನ ಬಡಾವಣೆ ಸರಸ್ವತಿಪುರಂ ಹಾಸನ 2) ಕಿರಣ್ ಬಿನ್ ಜಗದೀಶ, 28 ವರ್ಷ, ಮಾವಿನಹಳ್ಳಿ, ಹಾಸನ ತಾಲ್ಲೂಕು 3) ಹರ್ಷ ಬಿನ್ ರವಿ, 22 ವರ್ಷ, ಚಿಕ್ಕಹೊನ್ನೇನಹಳ್ಳಿ, ಹಾಸನ ನಗರ 4) ದೊರೆಸ್ವಾಮಿ ಬಿನ್ ಕೆಂಪೇಗೌಡ, 50 ವರ್ಷ, ರಿಂಗ್ ರಸ್ತೆ ಹಾಸನ 5) ಚೇತನ್ ಬಿನ್ ಪ್ರೇಮ್ಕುಮಾರ್,  27 ವರ್ಷ, ಎಸ್ಎಲ್ವಿ ಸ್ಕೂಲ್  ಹತ್ತಿರ ಹಾಸನ  6) ಕಿರಣ್ ಬಿನ್ ಸಿದೇಗೌಡ, 21 ವರ್ಷ, 2 ನೇ ಕ್ರಾಸ್, ಜಯನಗರ, ಹಾಸನ ಎಂದು ತಿಳಿಸಿದವರನ್ನು ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿ ಪಣಕ್ಕಿಟ್ಟಿದ್ದ  2225/- ನಗದನ್ನು ಅಮಾನತ್ತುಪಡಿಸಿಕೊಂಡು ಹಾಸನ  ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ. 

No comments: