* * * * * * HASSAN DISTRICT POLICE

Friday, February 16, 2018

PRESS NOTE 16-02-2018



                                  ಪತ್ರಿಕಾ ಪ್ರಕಟಣೆ                ದಿನಾಂಕ: 16-02-2018
ಟ್ರ್ಯಾಕ್ಟರ್ ನ ಅಯಾ ತಪ್ಪಿ, ಚಾಲಕ ಸಾವು
        ದಿನಾಂಕ: 15-02-2018 ರಂದು ಬೆಳಿಗ್ಗೆ 10-20 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಅರೇಹಳ್ಳಿ ಹೋಬಳಿ, ಜಕನಹಳ್ಳಿ ಗ್ರಾಮದ ವಾಸಿ ಶ್ರೀ ಪಿಲೀಫ್, ರವರು ಅದೇ ಗ್ರಾಮದ ಶ್ರೀ ವಿಶ್ವನಾಥ, ರವರ ತೋಟದ ರೈಟರ್ ಆಗಿ ಕೆಲಸ ನಿರ್ವಹಿಸಿಕೊಂಡಿದ್ದು, ಶ್ರೀ ಪಿಲೀಫ್, ರವರು ಕೆಎ-18 443 ರ ಟ್ರ್ಯಾಕ್ಟರ್ ಮತ್ತು ಕೆಎ-18 445 ರ ಟ್ರೇಲರ್ ನ್ನು ತೆಗೆದುಕೊಂಡು ಬೇಲೂರು ತಾಲ್ಲೂಕು, ಅರೇಹಳ್ಳಿ ಹೋಬಳಿ, ಶಿರಗೂರು ಗ್ರಾಮದ ಜಕನಹಳ್ಳಿ ಗ್ರಾಮದ ಎಸ್ಟೇಟ್ ನ ಇಳಿಜಾರು ರಸ್ತೆಯಲ್ಲಿ ಹೋಗುತ್ತಿದ್ದಾಗ ಟ್ರ್ಯಾಕ್ಟರ್ ಆಯಾತಪ್ಪಿ ಮರಕ್ಕೆ ಡಿಕ್ಕಿಯಾದ ಪರಿಣಾಮ ಶ್ರೀ ಪಿಲೀಫ್, 63 ವರ್ಷ, ಜಕನಹಳ್ಳಿ ಗ್ರಾಮ, ಅರೇಹಳ್ಳಿ ಹೋಬಳಿ, ಬೇಲೂರು ತಾಲ್ಲೂಕು, ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ತೋಟದ ಮಾಲೀಕರಾದ ಶ್ರೀ ವಿಶ್ವನಾಥ್, ರವರು ಕೊಟ್ಟ ದೂರಿನ ಮೇರೆಗೆ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪರಿಚಿತ ವಾಹನ ಡಿಕ್ಕಿ ಪಾದಚಾರಿ ಮಹಿಳೆ ಸಾವು
        ದಿನಾಂಕ: 15-02-2018 ರಂದು ಬೆಳಿಗ್ಗೆ 5-00 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಕಟ್ಟಾಯ ಹೋಬಳಿ, ಕಟ್ಟಾಯ ಗ್ರಾಮದ ವಾಸಿ ಶ್ರೀಮತಿ ತಂಗ್ಯಮ್ಮ, ರವರು ಕಟ್ಟಾಯ ಗ್ರಾಮದ ಶೆಟ್ಟಿಹಳ್ಳಿ ರಸ್ತೆ ಕ್ರಾಸ್ ನಿಂದ ಹಾಸನ-ಅರಕಲಗೂಡು ಕಡೆಗೆ ಹೋಗುವ ರಸ್ತೆ ದಾಟುತ್ತಿದ್ದಾಗ ಯಾವುದೋ ವಾಹನ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಶ್ರೀಮತಿ ತಂಗ್ಯಮ್ಮ, ರವರಿಗೆ ಡಿಕ್ಕಿ ಮಾಡಿದ ಪರಿಣಾಮ ಶ್ರೀಮತಿ ತಂಗ್ಯಮ್ಮ ಕೋಂ ಮೂಗಸ್ವಾಮಿಗೌಡ, 55 ವರ್ಷ, ಕಟ್ಟಾಯ ಗ್ರಾಮ, ಕಟ್ಟಾಯ ಹೋಬಳಿ, ಹಾಸನ ತಾಲ್ಲೂಕು ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಮೃತರ ಮಗ ಶ್ರೀ ಶೇಖರ್, ರವರು ಕೊಟ್ಟ ದೂರಿನ ಮೇರೆಗೆ ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಅಪರಿಚಿತ ವಾಹನ ಡಿಕ್ಕಿ, ಪಾದಚಾರಿ ಸಾವು
        ದಿನಾಂಕ: 15-02-2018 ರಂದು ರಾತ್ರಿ 9-30 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಮಾದಿಹಳ್ಳಿ ಹೋಬಳಿ, ಅಂಗಡಿಹಳ್ಳಿ ಗ್ರಾಮದ ವಾಸಿ ಶ್ರೀ ಸೊಂಡಿ ರವರು ಬೇಲೂರು ತಾಲ್ಲೂಕು, ಮಾದಿಹಳ್ಳಿ ಹೋಬಳಿ, ಹಾಸನ-ಬೇಲೂರು ರಸ್ತೆ, ಹತ್ತಿರ ಮಲ್ಲಿಕಾರ್ಜುನಪುರದ ಕಡೆಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಯಾವುದೋ ವಾಹನದ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಶ್ರೀ ಸೊಂಡಿ, ರವರಿಗೆ ಡಿಕ್ಕಿ ಮಾಡಿದ ಪರಿಣಾಮ ಶ್ರೀ ಸೊಂಡಿ ಬಿನ್ ಚಮ್ಮೆ, 70 ವರ್ಷ, ಅಂಗಡಿಹಳ್ಳಿ ಗ್ರಾಮ, ಮಾದಿಹಳ್ಳಿ ಹೋಬಳಿ, ಬೇಲೂರು ತಾಲ್ಲೂಕು, ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಮೃತರ ಸೊಸೆ ಶ್ರೀಮತಿ ಇಲೋದ, ರವರು ಕೊಟ್ಟ ದೂರಿನ ಮೇರೆಗೆ ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

No comments: