* * * * * * HASSAN DISTRICT POLICE

Friday, February 16, 2018

PRESS NOTE 15-02-2018



                ಪತ್ರಿಕಾ ಪ್ರಕಟಣೆ                          ದಿನಾಂಕ: 15-02-2018
ಬೈಕ್  ನಿಯಂತ್ರಣ ತಪ್ಪಿ, ಬೈಕ್ ಸವಾರ ಸಾವು:

        ದಿನಾಂಕ: 14-02-2018 ರಂದು ಸಂಜೆ 5-30 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಜಾವಗಲ್ ಹೋಬಳಿ, ಮೊಸಳೆ ಗ್ರಾಮದ ವಾಸಿ ಶ್ರೀ ನಿಂಗಪ್ಪ, ರವರ ಬಾಬ್ತು ಕೆಎ-19 ಇಎಫ್-5422 ರ ಹೀರೋ ಹೋಂಡಾ ಬೈಕ್ನಲ್ಲಿ ಅರಸೀಕೆರೆ ತಾಲ್ಲೂಕು, ಜಾವಗಲ್ ಟೌನ್ ಎನ್ಹೆಚ್-234 ರ ಕೆಇಬಿ ಮುಂಭಾಗದಲ್ಲಿ ಹೋಗುತ್ತಿದ್ದಾಗ ಬೈಕ್ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ನ ನಿಯಂತ್ರಣದ ತಪ್ಪಿದ ಪರಿಣಾಮ ಶ್ರೀ ನಿಂಗಪ್ಪ, ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಜಾವಗಲ್ ಸಕರ್ಾರಿ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ತಪಾಸಣೆ ನಡೆಸಲಾಗಿ ಶ್ರೀ ನಿಂಗಪ್ಪ ಬಿನ್ ಮಲ್ಲಪ್ಪ,   62 ವರ್ಷ, ಮೊಸಳೆ ಗ್ರಾಮ, ಜಾವಗಲ್ ಹೋಬಳಿ, ಅರಸೀಕೆರೆ ತಾಲ್ಲೂಕು. ರವರು ಮೃತರ ಸಂಬಂಧಿಕರಾದ ಶ್ರೀ ಪ್ರಭಾಕರ್, ರವರು ಕೊಟ್ಟ ದೂರಿನ ಮೇರೆಗೆ ಜಾವಗಲ್ ಪೊಲೀಸ್ ಠಾಣೆಯಲ್ಲಿ ಪ್ರರಕಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಕಾರು ಮತ್ತು ಬೈಕ್ ಮುಖಾ-ಮುಖಿ ಡಿಕ್ಕಿ, ಇಬ್ಬರ ಸಾವು
      ದಿನಾಂಕ: 13-02-2018 ರಂದು ರಾತ್ರಿ 10-00 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ದೊಡ್ಡಪುರ ಗ್ರಾಮದ ವಾಸಿ ಶ್ರೀ ಎನ್.ಆರ್, ರಮೇಶ್, ರವರ ಬಾಬ್ತು ಕೆಎ-14 ಕ್ಯೂ 2067 ರ ಬೈಕ್ನಲ್ಲಿ ಸತ್ಯಮಂಗಲ ಬಡಾವಣೆಯಲ್ಲಿ ಕೂಲಿ ಕೆಲಸ ಮುಗಿಸಿಕೊಂಡು ವಾಪಸ್ ಮನೆಗೆ ಹೋಗಲು ಹಾಸನ ತಾಲ್ಲೂಕು, ಹಾಸನ-ಅರಸೀಕೆರೆ ರಸ್ತೆ, ಸಂಕೇನಹಳ್ಳಿ ಗೇಟ್ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಕೆಎ-04 ಎಂಬಿ-4056 ರ ಕಾರಿನ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ಗೆ ಡಿಕ್ಕಿ ಮಾಡಿದ ಪರಿಣಾಮ ಶ್ರೀ ರಮೇಶ್ ಬಿನ್ ನಿಂಗೇಗೌಡ, 42 ವರ್ಷ, ದೊಡ್ಡಪುರ ಗ್ರಾಮ, ಕಸಬಾ ಹೋಬಳಿ, ಹಾಸನ ತಾಲ್ಲೂಕು ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ ಹಾಗೂ ಹಾಸನ ತಾಲ್ಲೂಕು, ಹಾಸನ-ಅರಸೀಕೆರೆ ರಸ್ತೆ, ಸಂಕೇನಹಳ್ಳಿ ಗೇಟ್ ಹತ್ತಿರ ಪುಟ್ಪಾತ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಶ್ರೀ ಕುಮಾರ್ ಬಿನ್ ರಾಮಯ್ಯ, 41 ವರ್ಷ, ಬೂವನಹಳ್ಳಿ ಗ್ರಾಮ, ಕಸಬಾ ಹೋಬಳಿ, ಹಾಸನ ತಾಲ್ಲೂಕು ರವರಿಗೂ ಸಹ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಮೃತ ಶ್ರೀ ರಮೇಶ್, ರವರ ಮಗ ಶ್ರೀ ಚೇತನ್, ರವರು ಕೊಟ್ಟ ದೂರಿನ ಮೇರೆಗೆ ಹಾಸನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರರಕಣ ದಾಖಲಿಸಿ ತನಿಖೆಯಲ್ಲಿರುತ್ತೆ. 

ಕಾರು ಬೈಕ್ಗೆ ಡಿಕ್ಕಿ, ಬೈಕ್ ಸವಾರ ಸಾವು:
ದಿನಾಂಕ: 14-02-2018 ರಂದು ಬೆಳಿಗ್ಗೆ 8-30 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಹಳೇಬೀಡು ಹೋಬಳಿ, ಬಂಡಿಲಕ್ಕಪ್ಪನಕೊಪ್ಪಲು ಗ್ರಾಮ ವಾಸಿ ಶ್ರೀ ಪಾಪನಾಯಕ, ರವರ ಬಾಬ್ತು ಕೆಎ-46 ಜೆ-4521 ರ ಟಿವಿಎಸ್ ಬೈಕ್ನಲ್ಲಿ ಬೇಲೂರು ತಾಲ್ಲೂಕು, ಹಳೇಬೀಡು ಗ್ರಾಮದ ಕೆರೆಯ ಏರಿ ಮೇಲೆ ಹಳೇಬೀಡು-ಹಾಸನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಕೆಎ-19 ಟಿಸಿ-4-2017-18 ಸಿಲ್ವರ್ ಬಣ್ಣ ಕಾರಿನ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ಗೆ ಡಿಕ್ಕಿ ಮಾಡಿದ ಪರಿಣಾಮ ಪಾಪಾನಾಯಕ, ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಹಳೇಬೀಡಿನ ಸಕರ್ಾರಿ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ತಪಾಸಣೆ ನಡೆಸಲಾಗಿ ಶ್ರೀ ಪಾಪಾನಾಯಕ ಬಿನ್ ಲಕ್ಷ್ಯಪ್ಪನಾಯಕ, 72 ವರ್ಷ, ಬಂಡಿಲಕ್ಕಪ್ಪನಹಳ್ಳಿ ಗ್ರಾಮ, ಹಳೇಬೀಡು ಹೋಬಳಿ, ಬೇಲೂರು ತಾಲ್ಲೂಕು. ರವರು ಮೃತಪಟ್ಟಿರುತ್ತಾರೆಂದು ತಿಳಿಸಿದ ಮೇರೆಗೆ ಮೃತ ಅಣ್ಣ ಶ್ರೀ ಸಕಪ್ಪನಾಯಕ, ರವರು ಕೊಟ್ಟ ದೂರಿನ ಮೇರೆಗೆ ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಕೆಎಸ್ಆರ್  ಟಿಸಿ ಬಸ್  ಬೈಕ್ಗೆ ಡಿಕ್ಕಿ, ಬೈಕ್ ಒಂದು ಸಾವು ಒಬ್ಬರಿಗೆ ಗಾಯ:
  ದಿನಾಂಕ: 14-02-2018 ರಂದು ರಾತ್ರಿ 9-45 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಕಟ್ಟಾಯ ಹೋಬಳಿ, ಮಾದಾಪುರ ಗ್ರಾಮದ ವಾಸಿ ಶ್ರೀ ಅಶೋಕ, ರವರ ಬಾಬ್ತು ಕೆಎ-13ಇಸಿ-9338 ರ ಸ್ಪ್ಲೆಂಡರ್ ಬೈಕ್ನಲ್ಲಿ ಅಣ್ಣ ಶ್ರೀ ಎಂ.ಜೆ. ಶಿವಣ್ಣ, ರವರೊಂದಿಗೆ ಕಾರ್ಯಕ್ರಮಕ್ಕೆ ಹೊಳೆನರಸೀಪುರ ತಾಲ್ಲೂಕು, ಸಿಗರನಹಳ್ಳಿ ಗ್ರಾಮಕ್ಕೆ ಹೋಗಿದ್ದು, ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ ಗ್ರಾಮಕ್ಕೆ ಹೋಗಲು ಹೊಳೆನರಸೀಪುರ ತಾಲ್ಲೂಕು, ಹಳೇಕೋಟೆ ಹೋಬಳಿ, ಹಾಸನ-ಮೈಸೂರು ರಸ್ತೆ, ಕ್ಯಾತನಹಳ್ಳಿ ಕ್ರಾಸ್ ಹತ್ತಿರ ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಕೆಎ-13 ಎಫ್-1912 ರ ಕೆಎಸ್ಆರ್ಟಿಸಿ ಬಸ್ಸಿನ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ಗೆ ಡಿಕ್ಕಿ ಮಾಡಿದ ಪರಿಣಾಮ ಶ್ರೀ ಅಶೋಕ ಮತ್ತು ಶ್ರೀ ಶಿವಣ್ಣ, ರವರುಗಳು ಬೈಕ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಹಾಸನ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಶ್ರೀ ಅಶೋಕ ಬಿನ್ ಲಕ್ಷ್ಮೇಗೌಡ, 48 ವರ್ಷ, ಮಾದಪುರ ಗ್ರಾಮ, ಕಟ್ಟಾಯ ಹೋಬಳಿ, ಹಾಸನ ತಾಲ್ಲೂಕು  ರವರು ಮಾರ್ಗಮಧ್ಯೆ ಮೃತಪಟ್ಟಿರುತ್ತಾರೆ ಹಾಗೂ ಮೃತರ ಅಣ್ಣ ಶ್ರೀ ಶಿವಣ್ಣ ಬಿನ್ ಲಕ್ಷ್ಮೇಗೌಡ, ರವರು ಹಾಸನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆಂದು ಮೃತರ ಸಂಬಂಧಿಕರಾದ ಶ್ರೀ ಎಂ.ಕೆ. ಲಕ್ಕೇಗೌಡ, ರವರು ಕೊಟ್ಟ ದೂರಿನ ಮೇರೆಗೆ ಹೊಳೆನರಸೀಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

No comments: