* * * * * * HASSAN DISTRICT POLICE

Thursday, February 8, 2018

PRESS NOTE : 08-02-2018


ಪತ್ರಿಕಾ ಪ್ರಕಟಣೆ             ದಿನಾಂಕ: 08-02-2018

ಲಾರಿ ಬೈಕ್ಗೆ, ಡಿಕ್ಕಿ ಬೈಕ್ ಸವಾರನ ಸಾವು:   ದಿನಾಂಕ: 07-02-2018 ರಂದು ಮಧ್ಯಾಹ್ನ 1-30 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಜಾವಗಲ್ ಜನತಾ ಬಡಾವಣೆ ವಾಸಿ ಶ್ರೀ ಮಹಮದ್ ಶಫಿ, ರವರ ಬಾಬ್ತು ಕೆಎ-13 ಇಎಫ್-6400 ರ ಬೈಕ್ನಲ್ಲಿ ಅರಸೀಕೆರೆ ತಾಲ್ಲೂಕು, ಜಾವಗಲ್ ಹೋಬಳಿ, ಹಳೇಬೀಡು-ಜಾವಗಲ್ ರಸ್ತೆ, ಎನ್ಹೆಚ್-234 ರಸ್ತೆಯಲ್ಲಿ ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಕೆಎ-12 ಎ-5693 ರ ಲಾರಿಯ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ಗೆ ಡಿಕ್ಕಿ ಮಾಡಿದ ಪರಿಣಾಮ ಶ್ರೀ ಮಹಮದ್ ಶಫಿ, ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಜಾವಗಲ್ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಶ್ರೀ ಮಹಮದ್ ಶಫೀ ಬಿನ್ ಬಾಷಸಾಬ್, 49 ವರ್ಷ, ಜನತಾ ಬಡಾವಣೆ, ಜಾವಗಲ್ ಅರಸೀಕೆರೆ ತಾಲ್ಲೂಕು ರವರು ಮಾರ್ಗ ಮಧ್ಯೆ ಮೃತಪಟ್ಟಿರುತ್ತಾರೆಂದು ಮೃತರ ಅಣ್ಣ ಶ್ರೀ ಮಹಮದ್ ಇಲಿಯಾಜ್, ರವರು ಕೊಟ್ಟ ದೂರಿನ ಮೇರೆಗೆ ಜಾವಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

No comments: