* * * * * * HASSAN DISTRICT POLICE

Friday, February 2, 2018

PRESS NOTE : 02-02-2018

                           ಪತ್ರಿಕಾ ಪ್ರಕಟಣೆ         ದಿನಾಂಕ: 02-02-2018

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರದ ಆರೋಪವೆಸಗಿದ್ದ ಆರೋಪಿಗೆ 7 ವರ್ಷಗಳ ಕಾಲ ಕಾರಾಗೃಹವಾಸ 5 ಸಾವಿರ ದಂಡ :                       ಹಾಸನದ ಮಾನ್ಯ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣ ಸಂಖ್ಯೆ ಎಸ್.ಸಿ. 163/2011 ರಲ್ಲಿ ಆರೋಪಿ ಮಹೇಶ್ನಾಯ್ಕ್ ಬಿನ್ ಕೃಷ್ಣನಾಯ್ಕ್, ಕೋರನಹಳ್ಳಿ ಕೊಪ್ಪಲು ಗ್ರಾಮ, ಬಾಣಾವರ ಹೋಬಳಿ, ಅರಸೀಕೆರೆ ತಾಲ್ಲೂಕು, ಈತನು ಅಪ್ರಾಪ್ತ ಬಾಲಿಕಿಯನ್ನು ಬಾಣಾವರ ಬಸ್ ನಿಲ್ದಾಣದಿಂದ ಆಕೆಯನ್ನು ಮದುವೆ ಮಾಡಿಕೊಳ್ಳುತ್ತೇನೆ ಬಾ ಎಂದು ಕರೆದಿದ್ದು, ಆಕೆ ಒಪ್ಪದಿದ್ದಾಗ, ಅವಳನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಅಪಹರಣ ಮಾಡಿದ್ದು, ನಂತರ ಆಕೆಯನ್ನು ಪ್ರಕರಣದ ಸಾಕ್ಷಿ-08 ಮಂಜಾನಾಯ್ಕ್ರವರು ವಾಸವಿದ್ದ ಹಲಸುಲಿಗೆ ಗ್ರಾಮದ ಕಾಫಿ ಎಸ್ಟೇಟ್ನಲ್ಲಿದ್ದ ಲೈನ್ ಮನೆಗೆ ಕರೆದುಕೊಂಡು ಹೋಗಿ ಸಾಕ್ಷಿ-01 ಅಪ್ರಾಪ್ತ ಬಾಲಕಿಯನ್ನು ಅಕ್ರಮವಾಗಿ ಬಂಧನದಲ್ಲಿಟ್ಟು ದಿನಾಂಕ: 20-09-2010 ರಿಂದ 24-09-2010 ರವರೆಗೆ ಅಪ್ರಾಪ್ತ ಬಾಲಕಿಯ ಮೇಲೆ ಅವಳನ್ನು ಹೆದರಿಸಿ ಅವಳ ಇಷ್ಟಕ್ಕೆ ವಿರುದ್ಧವಾಗಿ ಬಲತ್ಕಾರವಾಗಿ, ನಿರಂತರವಾಗಿ ಆಕೆಯ ಮೇಲೆ ಹಠ ಸಂಭೋಗ ಮಾಡಿದ್ದಾನೆಂದು ತನಿಖೆಯಿಂದ ಕಂಡು ಬಂದಿದ್ದರಿಂದ ಪ್ರಕರಣ ತನಿಖಾಧಿಕಾರಿಯವರಾದ ಶ್ರೀ ಎಂ.ವಿ. ಮಲ್ಲಾಪುರ್ ಇವರು ಆರೋಪಿತನ ವಿರುದ್ಧ ನ್ಯಾಯಾಲಯಕ್ಕೆ ಅಪಾದನಾ ಪಟ್ಟಿ ಸಲ್ಲಿಸಿದ್ದರು.
          ಪ್ರಕರಣದ ವಿಚಾರಣೆ ನಡೆಸಿದ ಹಾಸನದ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮಾನ್ಯ ಶ್ರೀ ಚನ್ನಕೇಶವ ಇವರು ಆರೋಪಿಯು ಆಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರದಂತಹ ಅಪರಾಧವೆಸಗಿರುತ್ತಾನೆಂದು ತೀರ್ಮಾನಿಸಿ ಆರೋಪಿಗೆ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿದ್ದಕ್ಕಾಗಿ ಐಪಿಸಿ ಕಲಂ 366 ರಡಿಯಲ್ಲಿ 5 ವರ್ಷಗಳ ಕಾಲ ಕಾರಾವಾಸದ ಶಿಕ್ಷೆ ಹಾಗೂ 5,000/- ದಂಡ ವಿಧಿಸಿದ್ದು, ಆಕೆಯನ್ನು ಅಕ್ರಮ ಬಂಧನದಲ್ಲಿಟ್ಟಿದ್ದಕ್ಕಾಗಿ ಐಪಿಸಿ ಕಲಂ 368 ರಡಿಯಲ್ಲಿ 5 ವರ್ಷಗಳ ಕಾಲ ಕಾರಾವಾಸದ ಶಿಕ್ಷೆ ಹಾಗೂ ರೂ 5,000/- ದಂಡ ವಿಧಿಸಿದ್ದು, ಮತ್ತು ಆಕೆಯ ಮೇಲೆ ಬಲಾತ್ಕಾರವಾಗಿ ಅತ್ಯಾಚಾರವೆಸಗಿದ್ದಕ್ಕಾಗಿ ಐಪಿಸಿ ಕಲಂ 376 ರಡಿಯಲ್ಲಿ 7 ವರ್ಷಗಳ ಕಾಲ ಕಾರಾಗೃಹವಾಸದ ಶಿಕ್ಷೆ, ರೂ 10,000/- ವಿಧಿಸಿ ದಿನಾಂಕ: 30-01-2018 ರಂದು ತೀರ್ಪು ನೀಡಿರುತ್ತಾರೆ.

No comments: