* * * * * * HASSAN DISTRICT POLICE

Sunday, January 28, 2018

PRESS NOTE : 28-01-2018

ಪತ್ರಿಕಾ ಪ್ರಕಟಣೆ         ದಿನಾಂಕ: 28-01-2018

ಮಟ್ಕಾ-ಜೂಜಾಡುತ್ತಿದ್ದವನ ಬಂಧನ, ಬಂಧಿತನಿಂದ ಸುಮಾರು 980/- ನಗದು ವಶ
     ದಿನಾಂಕ: 27-01-2018 ರಂದು ಮಧ್ಯಾಹ್ನ 2-50 ಗಂಟೆ ಸಮಯದಲ್ಲಿ ಹಾಸನದ ಪೆನ್ಷನ್ ಮೊಹಲ್ಲಾ ಠಾಣಾ ವ್ಯಾಪ್ತಿಯ ವಲ್ಲಬಾಯಿ ರಸ್ತೆ ಶಂಕರ್ನಾಗ್ ಆಟೋ ನಿಲ್ದಾಣದ ಹತ್ತಿರ ಸಾರ್ವಜನಿಕರನ್ನು ವಂಚಿಸುವ ಉದ್ದೇಶದಿಂದ 1 ರೂ 80 ರೂಪಾಯಿ ಕೊಡುವುದಾಗಿ ಮಟ್ಕಾ ಜೂಜಾಡುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀ ರಂಜು ಬಿನ್ ಕಾಳಪ್ಪ, 35 ವರ್ಷ, 3ನೇ ಕ್ರಾಸ್, ವಲ್ಲಬಾಯಿ ರಸ್ತೆ, ಹಾಸನ ನಗರ ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಮಟ್ಕಾ-ಜೂಜಾಟದಲ್ಲಿ ಪಣಕ್ಕಿಟ್ಟಿದ್ದ ಸುಮಾರು 980/- ನಗದನ್ನು   ನಗದನ್ನು ಅಮಾನತ್ತುಪಡಿಸಿಕೊಂಡು ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.
ಕಾರು ಪಲ್ಟಿ, ಒಂದು ಸಾವು 3 ಜನರಿಗೆ ಗಾಯ.
       ದಿನಾಂಕ: 27-01-2018 ರಂದು ಮಧ್ಯಾಹ್ನ 1-15 ಗಂಟೆ ಸಮಯದಲ್ಲಿ ಆಂದ್ರಪ್ರದೇಶ ರಾಜ್ಯ, ಗುಂಟೂರು ಜಿಲ್ಲೆ, ಗುಂಟೂರು ತಾಲ್ಲೂಕು, ಅಶೋಕನಗರ ವಾಸಿ ಶ್ರೀ ಕೃಷ್ಣ@ಭವಾನಿ ಕೃಷ್ಣ, ರವರು ಕೆಎ-53 ಎಂಇ-3224 ರ ಕಾರಿನಲ್ಲಿ ಸ್ನೇಹಿತರಾದ ಬೆಂಗಳೂರಿನ ಇಎಂಸಿ ಕಂಪನಿಯ ಕೆಲಸ ಮಾಡುತ್ತಿದ್ದ ಶ್ರೀ ರಾಕೇಶ್ ಮೂರ್ತಿ, ಶ್ರೀ ವಿಜಯಕುಮಾರಿ, ಸತೀಶ್ ರವರುಗಳೊಂದಿಗೆ ಹಾಸನ ಜಿಲ್ಲೆಯ ಆಲೂರು ಹತ್ತಿರವಿರುವ ಹೋಂ ಸ್ಟೇಗೆ ಹೋಗಲು ಹಾಸನ ತಾಲ್ಲೂಕು, ಶಾಂತಿಗ್ರಾಮ ಹೋಬಳಿ, ಮಡೆನೂರು ಗೇಟ್ ಎನ್ಹೆಚ್-75 ಬಿ.ಎಂ. ರಸ್ತೆಯಲ್ಲಿ ಹೋಗುತ್ತಿದ್ದಾಗ ಕಾರಿನಲ್ಲಿ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ರಸ್ತೆ ಪಕ್ಕದ ಹಳ್ಳಕ್ಕೆ ಪಲ್ಟಿಯಾದ ಪರಿಣಾಮ ಕಾರಿನಲ್ಲಿ ಶ್ರೀ ಕೃಷ್ಣ@ಭವಾನಿ ಕೃಷ್ಣ ಬಿನ್ ಕಾಳಿದಾಸ, 27 ವರ್ಷ, ಅಶೋಕನಗರ, ಗುಂಟೂರು ತಾಲ್ಲೂಕು ಗುಂಟೂರು ಜಿಲ್ಲೆ, ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ ಹಾಗೂ ಗಾಯಗೊಂಡ 3 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆಂದು ಮೃತರ ಸ್ನೇಹಿತರಾದ ಶ್ರೀ ರಾಕೇಶ್ ಮೂರ್ತಿ, ರವರು ಎನ್ ಡಿ. ಆರ್. ಕೆ. ಆಸ್ಪತ್ರೆಯಲ್ಲಿ ಕೊಟ್ಟ ಹೇಳಿಕೆ ಮೇರೆಗೆ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರರಕಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಹೆಂಗಸು ಕಾಣೆ
     ದಿನಾಂಕ: 15-12-2018 ರಂದು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ  ಚನ್ನರಾಯಪಟ್ಟಣದ ಅಗ್ರಹಾರ ಬೀದಿ ವಾಸಿ ಶ್ರೀ ರಾಮಕೃಷ್ಣ, ರವರ ಪತ್ನಿ ಶ್ರೀಮತಿ ಶೋಭಾ, ರವರು ಬೆಂಗಳೂರಿಗೆ ಕೆಲಸಕ್ಕೆ ಹೋಗುತ್ತೇನೆಂದು ಮನೆಯಲ್ಲಿ ಹೇಳಿ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀಮತಿ ಶೋಭಾ, ರವರ ಮಾವ ಶ್ರೀ ಚಿಕ್ಕಣ್ಣ, ರವರು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರರಕಣ ದಾಖಲಾಗಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ಶ್ರೀಮತಿ ಶೋಭಾ ಕೋಂ ರಾಮಕೃಷ್ಣ, 39 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಹಸಿರು ಬಣ್ಣದ ಚೂಡಿದಾರ ಧರಿಸಿರುತ್ತಾರೆಂದು ಈ ಹೆಂಗಸಿನ ಸುಳಿವು ಸಿಕ್ಕಲ್ಲಿ 08176-252333 ಕ್ಕೆ ಸಂಪರ್ಕಿಸುವುದು.

No comments: