* * * * * * HASSAN DISTRICT POLICE

Thursday, January 25, 2018

PRESS NOTE 25-01-2018



                                                       ಪತ್ರಿಕಾ ಪ್ರಕಟಣೆ                               ದಿನಾಂಕ: 25-01-2018.
ಕಾರು ಮರಕ್ಕೆ ಡಿಕ್ಕಿ ಮೂವರ ದಾರುಣ ಸಾವು, ಉಳಿದವರಿಗೆ ಸಣ್ಣಪುಟ್ಟ ಗಾಯ
        ದಿನಾಂಕ: 24-01-2018 ರಂದು ಬೆಳಿಗ್ಗೆ 11-30 ಗಂಟೆ ಸಮಯದಲ್ಲಿ ತುಮಕೂರು ಜಿಲ್ಲೆ ತುರವೆಕೆರೆ ತಾಲ್ಲೂಕುಸುಬ್ರಹ್ಮಣ್ಯನಗರ ವಾಸಿ ಸುಪ್ರೀತ್ ರವರು ತಮಗೆ ಮದುವೆ ನಿಶ್ಚಯವಾಗಿದ್ದ  ಬಾಗೂರು ಗ್ರಾಮದ ರಾಧಿಕಾ ರವರೊಂದಿಗೆ ಪ್ರೀ ವೆಡ್ಡಿಂಗ್ ಫೋಟೋ ತೆಗೆಸಿಕೊಳ್ಳಲು ರಾಧಿಕಾ, ರಾಧಿಕಾ ರವರ ಅಣ್ಣ ಪ್ರಭುದೇವ್, ತಾಯಿ, ಶಶಿಕಲಾ, ಫೋಟೋಗ್ರಾಪರ್ ಮಾರುತಿ, ಮೇಕರ್ ಶಿಲ್ಪ ಹಾಗೂ ಇನ್ನೊಬ್ಬ ಫೋಟೋಗ್ರಾಫರ್ ಅಜಯ್ಕುಮಾರ್ ರವರುಗಳೊಂದಿಗೆ ಎಲ್ಲರೂ ಕೆಎ-41-ಎನ್-1242 ರ ಕಾರಿನಲ್ಲಿ ಪ್ರಭುದೇವ್ ರವರ ಕಾರು ಚಾಲನೆ ಮಾಡಿಕೊಂಡು ತುಮಕೂರಿನಿಂದ ಸಕಲೇಶಪುರಕ್ಕೆ ಹೋಗಲು ಆಲೂರು ತಾಲ್ಲೂಕು, ಪಾಳ್ಯ ಗ್ರಾಮದ ಹತ್ತಿರ ಎನ್ಹೆಚ್-75 ಬಿ.ಎಂ. ರಸ್ತೆಯಲ್ಲಿ ಹೋಗುತ್ತಿದ್ದಾಗ ಕಾರಿನ ಚಾಲಕ ತನ್ನ ಕಾರನ್ನು ನಿರ್ಲಕ್ಷ್ಯತೆಯಿಂದ  ಓಡಿಸಿಕೊಂಡು ಹೋಗಿ ರಸ್ತೆಯ ಎಡ ಬದಿಯ ಮರಕ್ಕೆ ಡಿಕ್ಕಿ ಮಾಡಿ ಅಲ್ಲೆ ಮರದ ಪಕ್ಕ ನಿಂತಿದ್ದ ಒಂದು ಹೆಂಗಸಿಗೆ ಡಿಕ್ಕಿ ಮಾಡಿದ ಪರಿಣಾಮ  ಕಾರು ಪಲ್ಟಿಯಾಗಿ ರಸ್ತೆಗೆ ಬಿದ್ದಿತು. ಆಗ ರಸ್ತೆಯ ಎಡಭಾಗದಲ್ಲಿ ನಿಂತಿದ್ದ ಹೆಂಗಸು ರತ್ನಮ್ಮ, 50 ವರ್ಷ, ಹೂವಿನಹಳ್ಳಿ ಗ್ರಾಮ, ಹಾಸನ ತಾಲ್ಲೂಕು ರವರು ಸ್ಥಳದಲ್ಲಿಯೇ ಮೃತಪಟ್ಟರು. ಕಾರಿನಲ್ಲಿದ್ದ ರಾಧಿಕಾ, 21 ವರ್ಷ ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟರು. ಕಾರಿನಲ್ಲಿದ್ದ ಸುಪ್ರೀತ್, ಶಶಿಕಲಾ ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿಚಿಕಿತ್ಸೆಗಾಗಿ ಹಾಸನ ಜನಪ್ರಿಯ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸುಪ್ರೀತ್, 27 ವರ್ಷ ರವರು ಮೃತಪಟ್ಟಿರುತ್ತಾರೆ.ಕಾರಿನಲ್ಲಿದ್ದ ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿ ಆಲೂರು ಸರ್ಕಾರಿ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆದುಕೊಂಡಿರುತ್ತಾರೆಂದು ಪ್ರತ್ಯಕ್ಷದಶರ್ಿ ಶ್ರೀ ಮಾರುತಿ ರವರು ಕೊಟ್ಟ ದೂರಿನ ಮೇರೆಗೆ ಆಲೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.  

ಅಪರಿಚಿತ ವಾಹನ ಬೈಕಿಗೆ ಡಿಕ್ಕಿ, ಪೊಲೀಸ್ ಹೆಡ್ಕಾನ್ಸ್ಟೇಬಲ್ ರವರ ಸಾವು
ದಿನಾಂಕ: 24-01-2018 ರಂದು ರಾತ್ರಿ 09-45 ಗಂಟೆ ಸಮಯದಲ್ಲಿ  ಹಾಸನ ತಾಲ್ಲೂಕು, ಕಸಬಾ ಹೋಬಳಿ, ಬಿ.ಕಾಟೀಹಳ್ಳಿ ಗ್ರಾಮದ ವಾಸಿ ಹಾಗೂ ಜಾವಗಲ್ ಪೊಲೀಸ್ ಠಾಣೆಯಲ್ಲಿ ಹೆಡ್ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಸೋಮಶೇಖರ್ ಕೆ.ವಿ. ರವರು ಠಾಣೆಯಲ್ಲಿ ಕೆಲಸವನ್ನು ನಿರ್ವಹಿಸಿಕೊಂಡು ನಂತರ ಸಮನ್ಸ್ ಜಾರಿಯ ಬಗ್ಗೆ ಹಳೇಬೀಡು ಠಾಣೆಗೆ ಹೋಗಿ ಸಮನ್ಸ್ ಜಾರಿ ಮಾಡಿಕೊಂಡು ನಂತರ ತಮ್ಮ ಬಾಬ್ತು ಕೆಎ-13-ಇಎ-4333 ರ ಹಿರೋಹೊಂಡಾ ಶೈನ್ ಬೈಕಿನಲ್ಲಿ ಹಳೇಬೀಡು-ಹಾಸನ ರಸ್ತೆಯ ಕೊಂಡಜ್ಜಿಕೊಪ್ಪಲು  ಗಡಿಯ ರಸ್ತೆಯ ಮುಂದೆ  ಹಾಸನದ  ಕಡೆಗೆ ರಸ್ತೆಯ ಎಡಬದಿಯಲ್ಲಿ ಹೋಗುತ್ತಿದ್ದಾಗ ಹಾಸನದ ಕಡೆಯಿಂದ ಬಂದ ಯಾವುದೋ ವಾಹನದ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕಿಗೆ ಡಿಕ್ಕಿ ಮಾಡಿದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಶ್ರೀ ಸೋಮಶೇಖರ್ ಬಿನ್ ವೈರಮುಡಿಗೌಡ, 45 ವರ್ಷ, ಹೆಡ್ಕಾನ್ಸ್ಟೇಬಲ್, ಜಾವಗಲ್ ಪೊಲೀಸ್ ಠಾಣೆ ರವರು  ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆಂದು ಮೃತರ ತಮ್ಮ ಶ್ರೀ ಪುರುಷೋತ್ತಮ ಕೆ.ವಿ. ರವರು ಕೊಟ್ಟ ದೂರಿನ ಮೇರೆಗೆ ಹಾಸನ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.

ಮನುಷ್ಯ ಕಾಣೆ
      ಹಾಸನ ನಗರ, ಕೆ.ಆರ್. ಪುರಂ, 9 ನೇ ಕ್ರಾಸ್ವಾಸಿ ಸೋಮಶೇಖರ್ ಹೆಚ್. ಕೆ. ರವರು ಎಲೆಕ್ಟ್ರಿಕಲ್ ಹೋಲ್ಸೇಲ್ ಡೀಲರ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಹಾಗೂ ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ಒಂದು ಗೋಡನ್ ಸಹ ಮಾಡಿಕೊಂಡಿದ್ದು, ಹಾಸನದಲ್ಲಿ ವಾಸವಾಗಿದ್ದರು.  ಬೆಂಗಳೂರಿಗೆ ಕೆಲಸಕ್ಕಾಗಿ ಹೋಗಿ ಬರುತ್ತಿದ್ದರು. ದಿನಾಂಕ: 23-01-2018 ರಂದು ಬೆಳಿಗ್ಗೆ 07-00 ಗಂಟೆ ಸಮಯದಲ್ಲಿ ಬೆಂಗಳೂರಿಗೆ ಹೋಗಿ ಬರುವುದಾಗಿ ಮನೆಯಿಂದ ಹೋದವರು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ ಪತ್ತೆ ಮಾಡಿಕೊಡಬೇಕೆಂದು ಸೋಮಶೇಖರ್ ಹೆಚ್.ಕೆ. ರವರ ಪತ್ನಿ ಶ್ರೀಮತಿ ಶಶಿಕಲಾ ರವರು ಕೊಟ್ಟ ದೂರಿನ ಮೇರೆಗೆ ಹಾಸನ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ವ್ಯಕ್ತಿಯ ಚಹರೆ: ಸೋಮಶೇಖರ್ ಹೆಚ್.ಕೆ., 50 ವರ್ಷ, 5'5'' ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾರೆ. ಕಾಣೆಯಾದ ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಹಾಸನ ಬಡಾವಣೆ ಠಾಣೆ  ಫೋನ್ ನಂ. 08172-268967 ಕ್ಕೆ ಸಂಪರ್ಕಿಸುವುದು.

ಹುಡುಗಿ ಕಾಣೆ



          ದಿನಾಂಕ: 08-01-2018 ರಂದು ಬೆಳಿಗ್ಗೆ 09-15 ಗಂಟೆ ಸಮಯದಲ್ಲಿ  ಅರಕಲಗೂಡು ತಾಲ್ಲೂಕು, ರಾಮನಾಥಪುರ ಹೋಬಳಿ, ರಘುಪತಿಕೊಪ್ಪಲು ಗ್ರಾಮದ ವಾಸಿ ಮಹದೇವ ಹೆಚ್.ಜೆ. ರವರ ಮಗಳು ಹರ್ಷಿತ ಹೆಚ್.ಎಂ. ಎಂದಿನಂತೆ ಕೊಣನೂರಿಗೆ ಕಾಲೇಜಿಗೆ ಹೋಗುವುದಾಗಿ ಮನೆಯಿಂದ ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಹರ್ಷಿತ ಹೆಚ್.ಎಂ. ರವರ ತಂದೆ ಶ್ರೀ ಮಹದೇವ ಹೆಚ್.ಜೆ. ರವರು ದಿನಾಂಕ: 24-01-2018 ರಂದು ಕೊಟ್ಟ ದೂರಿನ ಮೇರೆಗೆ ಕೊಣನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಹರ್ಷಿತ ಹೆಚ್.ಎಂ. ಬಿನ್ ಮಹದೇವ ಹೆಚ್.ಜೆ.  20 ವರ್ಷ, 5'3'' ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾಳೆ. ಕಾಣೆಯಾದ ಹುಡುಗಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಕೊಣನೂರು ಠಾಣೆ ಫೋನ್ ನಂ.  08175-226227  ಕ್ಕೆ ಸಂಪರ್ಕಿಸುವುದು.

No comments: