* * * * * * HASSAN DISTRICT POLICE

Wednesday, January 24, 2018

PRESS NOTE : 24-01-2018

ಪತ್ರಿಕಾ ಪ್ರಕಟಣೆ             ದಿನಾಂಕ: 24-01-2018
ಮ್ಯಾಕ್ಸಿ ಕ್ಯಾಬ್ ಆಟೋಗೆ ಡಿಕ್ಕಿ, ಆಟೋ ಚಾಲಕನ ಸಾವು:
             ದಿನಾಂಕ: 23-01-2018 ರಂದು ಸಂಜೆ 4-30 ಗಂಟೆ ಸಮಯದಲ್ಲಿ ಹಾಸನದ ವಿವೇಕಾನಗರದ ವಾಸಿ ಶ್ರೀ ಸ್ವಾಮಿ, ರವರ ಬಾಬ್ತು ಕೆಎ-13 ಬಿ-9450 ರ ಆಟೋದಲ್ಲಿ ಪತ್ನಿ ಶ್ರೀಮತಿ ಶ್ವೇತಾ ರವರೊಂದಿಗೆ ಅರಸೀಕೆರೆ ತಾಲ್ಲೂಕು, ಕಣಕಟ್ಟೆ ಹೋಬಳಿ, ಅರಸೀಕೆರೆ-ಹುಳಿಯಾರ್ ರಸ್ತೆ, ಯರಿಗೇನಹಳ್ಳಿ ಗೇಟ್ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಕೆಎ-04, 9620 ರ ಮ್ಯಾಕ್ಸಿ ಕ್ಯಾಬ್ ವಾಹನದ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಆಟೋಗೆ ಡಿಕ್ಕಿ ಮಾಡಿದ ಪರಿಣಾಮ ಶ್ರೀ ಸ್ವಾಮಿ ಬಿನ್ ಸಣ್ಣಪ್ಪ, 28 ವರ್ಷ, ವಿವೇಕಾನಗರ, ಹಾಸನ ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಪ್ರತ್ಯಕ್ಷದರ್ಶಿ ಶ್ರೀ ಕಿಶೋರ್, ರವರು ಕೊಟ್ಟ ದೂರಿನ ಮೇರೆಗೆ ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಬೈಕ್-ಬೈಕ್ಗೆ ಡಿಕ್ಕಿ ಬೈಕ್ ಹಿಂಬದಿ ಕುಳಿತಿದ್ದವನ ಸಾವು, ಒಬ್ಬರಿಗೆ ಗಾಯ
ದಿನಾಂಕ: 23-01-2018 ರಂದು ಬೆಳಿಗ್ಗೆ 11-30 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಹಳೇಬೀಡು ಹೋಬಳಿ, ಗಟ್ಟದಹಳ್ಳಿ ಗ್ರಾಮದ ವಾಸಿ ಶ್ರೀ ಛಾಯಪತಿ, ರವರು  ಅದೇ ಗ್ರಾಮದ ವಾಸಿ ಶ್ರೀ ಗಣೇಶ್, ರವರ ಬಾಬ್ತು ಕೆಎ-13-ಇಇ-5484 ರ ಬೈಕ್ನಲ್ಲಿ ಬೇಲೂರು ತಾಲ್ಲೂಕು, ಹಳೇಬೀಡು ಹೋಬಳಿ, ಗಟ್ಟದಹಳ್ಳಿ ಗ್ರಾಮದ ಶ್ರೀ ಕೃಷ್ಣಪ್ಪ, ರವರ ಜಮೀನಿನ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಕೆಎ-15-ಕೆ-2528 ರ ಬೈಕ್ನ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಕೆಎ-13-ಇಇ-5484 ರ ಬೈಕ್ಗೆ ಡಿಕ್ಕಿ ಮಾಡಿದ ಬಂದ ಪರಿಣಾಮ ಬೈಕ್ ಹಿಂಬದಿ ಕುಳಿತಿದ್ದ ಶ್ರೀ ಛಾಯಪತಿ ಬಿನ್ ಸುಬ್ಬರಾವ್, 76 ವರ್ಷ, ಗಟ್ಟದಹಳ್ಳಿ ಗ್ರಾಮ, ಹಳೇಬೀಡು ಹೋಬಳಿ, ಬೇಲೂರು ತಾಲ್ಲೂಕು, ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೆ ಮೃತಪಟ್ಟಿರುತ್ತಾರೆ. ಗಾಯಗೊಂಡ ಶ್ರೀ ಗಣೇಶ್, ರವರು ಬೇಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆಂದು ಮೃತರ ಅಣ್ಣ ಶ್ರೀ ಸತ್ಯನಾರಾಯಣ, ರವರು ಕೊಟ್ಟ ದೂರಿನ ಮೇರೆಗೆ ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಹೆಂಗಸು ಕಾಣೆ
ದಿನಾಂಕ: 11-01-2018 ರಂದು ಬೆಳಿಗ್ಗೆ ಸಂಜೆ 6-00 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಗುಂಡೇಗೌಡನಕೊಪ್ಪಲು ಗ್ರಾಮದ ವಾಸಿ ಶ್ರೀಮತಿ ನಾಗರತ್ನ, ರವರು ಮನೆಯಿಂದ ಹೊರಗೆ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀಮತಿ ನಾಗರತ್ನ, ರವರ ಅಣ್ಣ ಶ್ರೀ ಕೃಷ್ಣೇಗೌಡ, ರವರು ಕೊಟ್ಟ ದೂರಿನ ಮೇರೆಗೆ ಹಾಸನ ಬಡಾವಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಶ್ರೀಮತಿ ನಾಗರತ್ನ, 55 ವರ್ಷ , 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣ ಮೈಕಟ್ಟು. ಮನೆಯಿಂದ ಹೋಗುವಾಗ ಹಸಿರು ಬಣ್ಣದ ಸೀರೆ ಮತ್ತು ರವಿಕೆ ಧರಿಸಿರುತ್ತಾರೆ. ಈ ಹೆಂಗಸಿನ ಸುಳಿವು ಸಿಕ್ಕಲ್ಲಿ 08172-268967 ಕ್ಕೆ ಸಂಪರ್ಕಿಸುವುದು.

                                                    

No comments: