* * * * * * HASSAN DISTRICT POLICE

Saturday, January 20, 2018

PRESS NOTE : 20-01-2017

            ಪತ್ರಿಕಾ ಪ್ರಕಟಣೆ             ದಿನಾಂಕ: 20-01-2018

ಜೂಜಾಡುತ್ತಿದ್ದ ನ್ವಾವರ ಬಂಧನ, ಬಂಧಿತರಿಂದ ಸುಮಾರು 2,920/- ನಗದು ವಶ:

    ದಿನಾಂಕ: 19-01-2018 ರಂದು ಸಂಜೆ 7-00 ಗಂಟೆ ಸಮಯದಲ್ಲಿ ಹಾಸನ ನಗರದ ಹೊಸ ಬಸ್ ನಿಲ್ದಾಣದ ಹತ್ತಿರವಿರುವ ಖಾಲಿ ಜಾಗದಲ್ಲಿ ಅಂದರ್-ಬಾಹರ್ ಜೂಜಾಡುತ್ತಿದ್ದಾರೆಂದು ಶ್ರೀ ಸತ್ಯನಾರಾಯಣ, ಸಿಪಿಐ, ಹಾಸನ ನಗರ ವೃತ್ತ, ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು 1) ಜಗದೀಶ್ ಬಿನ್ ಅಣ್ಣೇಗೌಡ, 35 ವರ್ಷ, ಸತ್ಯಮಂಗಲ ಬಡಾವಣೆ, ಹಾಸನ 2) ನಾಗರಾಜ ಬಿನ್ ಬೆಟ್ಟೇಗೌಡ, 34 ವರ್ಷ, ಆಡುವಳ್ಳಿ, ಹಾಸನ 3) ಜಗದೀಶ್ ಬಿನ್ ಲೇಟ್ ರಾಮಶೆಟ್ಟಿ, 41 ವಷ್, ಬಿ. ಕಾಟೀಹಳ್ಳಿ, ಹಾಸನ 4) ಆನಂದ ಬಿನ್ ಮಂಜೇಗೌಡ, 33 ವರ್ಷ, ಬೂವನಹಳ್ಳಿ ಹಾಸನ ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಜೂಜಾಟಾದಲ್ಲಿ ಪಣಕ್ಕಿಟ್ಟಿದ್ದ ಸುಮಾರು 2,920/- ನಗದನ್ನು ಅಮಾನತ್ತು ಪಡಿಸಿಕೊಂಡು ಹಾಸನ ಬಡಾವಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಆಟೋ ಬೈಕ್ಗೆ ಡಿಕ್ಕಿ, ಬೈಕ್ ಸವಾರ ಸಾವು

ದಿನಾಂಕ: 19-01-2018 ರಂದು ಸಂಜೆ 6-10 ಗಂಟೆ ಸಮಯದಲ್ಲಿ  ಸಕಲೇಶಪುರ ತಾಲ್ಲೂಕು, ನಡಹಳ್ಳಿ ಗ್ರಾಮದ ವಾಸಿ ಶ್ರೀ ಲಕ್ಷ್ಮಣ, ರವರ ಬಾಬ್ತು ಕೆಎ-46,ಕೆ-4172 ರ ಬೈಕ್ನಲ್ಲಿ ಅದೇ ಗ್ರಾಮದ ವಾಸಿ ಶ್ರೀ ರಾಜೇಶ್, ರವರೊಂದಿಗೆ ಕೆಲಸದ ನಿಮಿತ್ತ ಸಕಲೇಶಪುರಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ವಾಪಸ್ ಸಕಲೇಶಪುರ ಟೌನ್ ಟೋಲ್ ಗೇಟ್ನಿಂದ ಮುಂದೆ ಎಸ್.ಎಂ.ಎಲ್. ಸವರ್ಿಸ್  ಸ್ಟೇಷನ್ ಬಳಿ ಬಿ.ಎಂ. ರಸ್ತೆಯಲ್ಲಿ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಕೆಎ-46-7399 ರ ಆಟೋ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ಗೆ ಡಿಕ್ಕಿ ಮಾಡಿದ ಪರಿಣಾಮ ಬೈಕ್ ಸಮೇತ ರಸ್ತೆಗೆ ಬಿದ್ದು ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಸಕಲೇಶಪುರ ಆಸ್ಪತ್ರೆ ದಾಖಲಿಸಿದ್ದು, ವೈದ್ಯರು ತಪಾಸಣೆ ನಡೆಸಲಾಗಿ ಶ್ರೀ ಲಕ್ಷ್ಮಣ ಬಿನ್ ಈರಯ್ಯ, 23 ವರ್ಷ, ನಡಹಳ್ಳಿ ಗ್ರಾಮ, ಸಕಲೇಶಪುರ ತಾಲ್ಲೂಕು ರವರು ಮೃತ ಪಟ್ಟಿರುತ್ತಾರೆಂದು ತಿಳಿಸಿದ ಮೇರೆಗೆ ಹಾಗೂ ಗಾಯಗೊಂಡ ಶ್ರೀ ಸಚ್ಚಿನ್ ರವರು ಹಾಸನ ಸಕರ್ಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆಂದು ಮೃತರ ಸಂಬಂಧಿಕರಾದ ಶ್ರೀ ಬಸವರಾಜು, ರವರು ಕೊಟ್ಟ ದೂರಿನ ಮೇರೆಗೆ ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಗಂಡಸು ಕಾಣೆ

ದಿನಾಂಕ: 01-01-2018 ರಂದು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ಹಾಸನದ ಹೊಸಲೈನ್ ರಸ್ತೆ ವಾಸಿ ಶ್ರೀ ಆಸೀಫ್ ಪಾಷ, ರವರು ಮನೆಯಿಂದ ಹೊರಗೆ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀ ಆಸೀಫ್ ಪಾಷ, ರವರು ಕೊಟ್ಟ ದೂರಿನ ಮೇರೆಗೆ ಪೆನ್ಷನ್ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಗಂಡಸಿನ ಚಹರೆ: ಶ್ರೀ ಆಸೀಫ್ ಪಾಷ, 58 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣ ಮೈಕಟ್ಟು, ಕನ್ನಡ ಮತ್ತು ಹಿಂಧಿ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಬಿಳಿ ಶಟರ್್ ಮತ್ತು ಕಪ್ಪು ಪ್ಯಾಂಟ್ ಧರಿಸಿರುತ್ತಾರೆ. ಈ ವ್ಯಕ್ತಿಯ ಸುಳಿವು ಸಿಕ್ಕಲ್ಲಿ 08172-272260 ಸಂಪಕರ್ಿಸುವುದು.

ಹುಡುಗಿ ಕಾಣೆ

       ದಿನಾಂಕ: 18-01-2018 ರಂದು ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ  ಬೇಲೂರು ಪಟ್ಟಣ ಜೆಪಿ ನಗರ ವಾಸಿ  ಆದಂ ಸಾಬ್ ರವರ ಮಗಳು  ಹೀನಾ ಮನೆಯಲ್ಲಿ ಯಾರಿಗೂ ತಿಳಿಸದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು  ಹೀನಾ ರವರ ಅಣ್ಣ  ಮನ್ಸೂರ್ ಶರೀಫ್ ರವರು ಕೊಟ್ಟ ದೂರಿನ ಮೇರೆಗೆ ಬೇಲೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಹೀನಾ ಬಿನ್ ಲೇಟ್ ಆದಂಸಾಬ್, 23 ವರ್ಷ, 5'3'' ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾಳೆ. ಕಾಣೆಯಾದ ಹುಡುಗಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಬೇಲೂರು ಠಾಣೆ ಫೋನ್ ನಂ. 08177-222444 ಕ್ಕೆ ಸಂಪಕರ್ಿಸುವುದು.

ಗಂಡಸು ಕಾಣೆ       ದಿನಾಂಕ : 11-01-2018 ರಂದು  ಹೊಳೆನರಸೀಪುರ ಪಟ್ಟಣ, ಚನ್ನರಾಯಪಟ್ಟಣ ರಸ್ತೆ ವಾಸಿ ತಿಮ್ಮಶೆಟ್ಟಿ @ ಗಣೇಶ ರವರು ಬೆಂಗಳೂರಿಗೆ ತಮ್ಮ ಮಾವನ ಮನೆಗೆ ಹೋಗಿ  ಮಾವನ ಮನೆಯಿಂದ ಊರಿಗೆ ಹೋಗುವುದಾಗಿ ಮನೆಯಿಂದ ಹೊರಟವರು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ತಿಮ್ಮಶೆಟ್ಟಿ @ ಗಣೇಶ ರವರ ಪತ್ನಿ ಶ್ರೀಮತಿ ಗಾಯಿತ್ರಿ ರವರು ದಿನಾಂಕ: 20-01-2018 ರಂದು ಕೊಟ್ಟ ದೂರಿನ ಮೇರೆಗೆ ಹೊಳೆನರಸೀಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ವ್ಯಕ್ತಿಯ ಚಹರೆ: ತಿಮ್ಮಶೆಟ್ಟಿ @ ಗಣೇಶ, 43 ವರ್ಷ, 5'6'' ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾರೆ. ಕಾಣೆಯಾದ ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಹೊಳೆನರಸೀಪುಇರ ನಗರ ಠಾಣೆ ಫೋನ್ ನಂ. 08175- 273333ಕ್ಕೆ ಸಂಪಕರ್ಿಸುವುದು.

No comments: