* * * * * * HASSAN DISTRICT POLICE

Saturday, January 20, 2018

PRESS NOTE : 18-01-2018

ಪತ್ರಿಕಾ ಪ್ರಕಟಣೆ              ದಿನಾಂಕ: 18-01-2018


ಗಂಡಸು ಕಾಣೆ : ದಿನಾಂಕ: 11-01-2018 ರಂದು ಬೆಳಿಗ್ಗೆ 8-00 ಗಂಟೆ ಸಮಯದಲ್ಲಿ ಬೇಲೂರು ಪಟ್ಟಣದ ವೈಕುಂಠ ಬೀದಿ ವಾಸಿ ಶ್ರೀ ಮಂಜುನಾಥ ಪ್ರಸಾದ್, ರವರು ಬೇಲೂರು ಪಟ್ಟಣದ ನೆಹರು ನಗರದಲ್ಲಿರುವ ಹೊಯ್ಸಳ ಮಾರ್ಬಲ್ಸ್ನಲ್ಲಿ ಕೆಲಸ ಮಾಡಿಕೊಂಡಿದ್ದು, ಎಂದಿನಂತೆ ಕೆಲಸಕ್ಕೆ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀ ಮಂಜುನಾಥ ಪ್ರಸಾದ್, ರವರ ಪತ್ನಿ ಶ್ರೀಮತಿ ಕಲ್ಪನಾ, ರವರು ಕೊಟ್ಟ ದೂರಿನ ಮೇರೆಗೆ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಗಂಡಸಿನ ಚಹರೆ: ಶ್ರೀ ಮಂಜುನಾಥ್ ಪ್ರಸಾದ್ ಬಿನ್ ಶಿವರಾಮ್ಪ್ರಸಾದ್, 43 ವರ್ಷ, 5 ಅಡಿ ಎತ್ತರ, ಗೋಧಿಮೈಬಣ್ಣ, ಸಾಧಾರಣ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಬಿಳಿ ಮತ್ತು ಕಪ್ಪು ಮಿಶ್ರಿತ ಚೆಕ್ಸ್ ಶರ್ಟ್ ಮತ್ತು ಕಪ್ಪು ಫ್ಯಾಂಟ್ ಧರಿಸಿರುತ್ತಾರೆ. ಈ ವ್ಯಕ್ತಿಯ ಸುಳಿವು ಸಿಕ್ಕಲ್ಲಿ 08177-222444 ಕ್ಕೆ ಸಂಪರ್ಕಿಸುವುದು. 

No comments: