* * * * * * HASSAN DISTRICT POLICE

Saturday, January 13, 2018

PRESS NOTE : 13-01-2018

                       ಪತ್ರಿಕಾ ಪ್ರಕಟಣೆ              ದಿನಾಂಕ: 13-01-2018

ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಪ್ರಯಾಣ ಬೆಳಸುತ್ತಿದ್ದ ಐರಾವತ ವಾಹನ ಪಲ್ಟಿ 7 ಜನರ ಸಾವು, ಉಳಿದವರಿಗೆ ರಕ್ತಗಾಯ
ದಿನಾಂಕ: 12-01-2018 ರಂದು ರಾತ್ರಿ 11-20 ಗಂಟೆ ಸಮಯದಲ್ಲಿ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಹೊರಟಿದ್ದ  ಕೆಎ-01-ಎಫ್-8513 ರ ಕೆಎಸ್ಆರ್ಟಿಸಿ ಐರಾವತ ಬಸ್ಸಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 1) ಶ್ರೀ ಬಿ.ಜೆ.ಜಾರ್ಜ 2) ಶ್ರೀಮತಿ ಸೋನಿಯಾ 3) ಡಯಾನ 4) ರಾಕೇಶ್ ಪ್ರಭು 5) ಗಂಗಾಧರ, ಮೈಸೂರು ರಸ್ತೆ, ಬೆಂಗಳೂರು ದಕ್ಷಿಣ 6) ಶಿವಪ್ಪ ಛಲವಾದಿ ಐರಾವತ ವಾಹನದ ಚಾಲಕ 7) ಲಕ್ಷ್ಮಣ, ಐರಾವತ ವಾಹನದ ನಿವರ್ಾಹಕ 8) ಶ್ರೀಧರ ಹೆಗಡೆ 9) ಪುರುಷೋತ್ತಮ 10) ಸುಧಾ 11) ವಿನಯ ರವರುಗಳು ಸೇರಿದಂತೆ ಸುಮಾರು 46 ಜನರು ಪ್ರಯಾಣಿಸುತ್ತಿದ್ದು ದಿನಾಂಕ: 13-01-2018 ರಂದು ಬೆಳಗಿನ ಜಾವ 3-30 ಗಂಟೆಗೆ ಹಾಸನ ತಾಲ್ಲೂಕು, ಶಾಂತಿಗ್ರಾಮ ಹೋಬಳಿ, ಕೃಷಿ ಕಾಲೇಜಿನ ಹತ್ತಿರ ಎನ್.ಹೆಚ್-75, ಬಿ.ಎಂ.ರಸ್ತೆಯ ಎಡಭಾಗದಲ್ಲಿ ಅಳವಡಿಸಿರುವ ಕಬ್ಬಿಣದ ತಡೆ ಗೋಡೆಗೆ ಡಿಕ್ಕಿಯಾಗಿ ಸೇತುವೆಯ ಹಳ್ಳಕ್ಕೆ ಪಲ್ಟಿಯಾದ ಪರಿಣಾಮ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 1) ಶ್ರೀ ಬೀ.ಜೆ ಜಾರ್ಜ್ ಬಿನ್ ದೇವಸಯ್ಯ, 26 ವರ್ಷ, 2) ಸೋನಿಯಾ ಕೋಂ ವಾಸು, 28 ವರ್ಷ, 3) ಡಯಾನ ಬಿನ್ ದೇವಸಯ್ಯ, 20 ವರ್ಷ, 4) ರಾಕೇಶ್ ಪ್ರಭು ಬಿನ್ ಲೇಟ್ ರಾಮದಾಸ ಪ್ರಭು, 4 ಜನರು ನೇರಿಯಾ ಗ್ರಾಮ, ಬೆಳ್ತಂಗಡಿ ತಾಲ್ಲೂಕು, ದಕ್ಷಿಣ ಜಿಲ್ಲೆ 5) ಎನ್ ಗಂಗಾಧರ ಬಿನ್ ನರಸಿಂಹಯ್ಯ, 50 ವರ್ಷ, 4/, 8ನೇ ಕ್ರಾಸ್, 4 ನೇ ಮೈನ್, ಮೈಸೂರು ರಸ್ತೆ, ಬೆಂಗಳೂರು ದಕ್ಷಿಣ 6) ಶಿವಪ್ಪ ಛಲವಾದಿ, ಕೆಎ-01 ಎಫ್-8513 ರ ಬಸ್ ಚಾಲಕ ಬ್ಯಾಡ್ಜ್ ನಂ 6698, ಬೆಂಗಳೂರು ಡಿಪೋ-2, 7) ಲಕ್ಷ್ಮಣ, ಬಸ್ ನಿವರ್ಾಹಕ, ಬ್ಯಾಡ್ಜ್ ನಂ 7274, ಬೆಂಗಳೂರು ಡಿಪೋ-2, ರವರುಗಳಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ ಹಾಗೂ ಗಾಯಗೊಂಡ ಶ್ರೀಧರ್ ಹೆಗಡೆ ಬಿನ್ ಗಣಪತಿ ಹೆಗಡೆ, 24 ವರ್ಷ, ವಾಲ್ಮಿಕಿ ರಸ್ತೆ, ಬಸಪ್ಪ ಲೇಔಟ್, ಬೆಂಗಳೂರು ವಾಸ ಬಾಳಗೆರೆ ಗ್ರಾಮ ಸಿರಸಿ ತಾಲ್ಲೂಕು 2) ಪುರುಶೋತ್ತಮ 3) ಸುಧ 4) ವಿನಯ ರವರುಗಳು ಸೇರಿದಂತೆ ಸುಮಾರು 30-33 ಜನರು ಹಾಸನದ ಸರ್ಕಾರಿ ಮತ್ತು ಎನ್ಡಿಆರ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆಂದು ಶ್ರೀ ಶ್ರೀಧರ್ ಹೆಗಡೆ, ರವರು ಹಾಸನ ಸರ್ಕಾರಿ ಆಸ್ಪತ್ರೆಯಲ್ಲಿ ಕೊಟ್ಟ ಹೇಳಿಕೆ ಮೇರೆಗೆ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಮಟ್ಕಾ-ಜೂಜು ಅಡ್ಡೆ ಮೇಲೆ ದಾಳಿ ಓರ್ವನ ಬಂಧನ, ಬಂಧಿತನಿಂದ ಸುಮಾರು 1,400/ ನಗದು ವಶ:
   ದಿನಾಂಕ: 12-01-2017 ರಂದು ಮಧ್ಯಾಹ್ನ 2-00 ಗಂಟೆ ಸಮಯದಲ್ಲಿ ಹಾಸನದ ಟಿಪ್ಪು ನಗರದಲ್ಲಿರುವ ನಂದಿನಿ ಕ್ಷೀರ ಕೇಂದ್ರದ ಹತ್ತಿರ  ಮಟ್ಕಾ ಜೂಜಾಟಾಡುತ್ತಿದ್ದಾರೆಂದು ಶ್ರೀ ಡಿ. ಸತೀಶ್, ಪಿಐ, ಸಿಇಎನ್, ಪೊಲೀಸ್ ಠಾಣೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಮಟ್ಕಾ-ಜೂಜಾಡುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಮುನ್ನ ಬಿನ್ ಲೇಟ್ ಖಾಸಿಂ ಶರೀಫ್, 46 ವರ್ಷ, ಮಸೀದಿ ಹತ್ತಿರ, 4ನೇ ಕ್ರಾಸ್, ಪೆನ್ಷನ್ ಮೊಹಲ್ಲಾ ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿ ಪಣಕ್ಕಿಟ್ಟಿದ್ದ ಸುಮಾರು 1,400/- ನಗದನ್ನು ಅಮಾನತ್ತುಪಡಿಸಿಕೊಂಡು ಸಿಇಎನ್, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.
ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ, ಸುಮಾರು 10,047/- ಬೆಲೆಯ ಮದ್ಯ ವಶ:
ಪ್ರಕರಣ-01 : ದಿನಾಂಕ: 12-01-2018 ರಂದು ಮಧ್ಯಾಹ್ನ 3-15 ಗಂಟೆ ಸಮಯದಲ್ಲಿ ಶ್ರೀ ಸತ್ಯನಾರಾಯಣ, ಸಿಪಿಐ, ಹಾಸನ ನಗರ ವೃತ್ತ, ರವರು ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯ ನಿರ್ವಹಿಸುತ್ತಿದ್ದಾಗ ಹಾಸನ-ಬೆಂಗಳೂರು ರಸ್ತೆ, ಕಸ್ತೂರವಳ್ಳಿ ಗೇಟ್ ಹತ್ತಿರ ವಿಸ್ಮಯ ಕಾವ್ಯ ಹೋಟೆಲ್ ಹತ್ತಿರ ರಂಗನಾಥ ಪ್ರಾವಿಜನ್ ಸ್ಟೋರ್ ಅಂಗಡಿಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದು, ಸ್ಥಳಕ್ಕೆ ಹೋಗಿ ನೋಡಲಾಗಿ ಯಾವುದೇ ಪರವಾನಗಿಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ರಾಮು@ ರಾಮೇಗೌಡ ಬಿನ್ ತಮ್ಮೇಗೌಡ, 41ವರ್ಷ, ಕಸ್ತೂರವಳ್ಳಿಗೇಟ್, ಹಾಸನ ತಾಲ್ಲೂಕು ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಮಾರಾಟಕ್ಕಿಟ್ಟಿದ್ದ ಸುಮಾರು 6,395/- ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಹಾಸನ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.  
ಪ್ರಕರಣ-02 : ದಿನಾಂಕ: 12-01-2018 ರಂದು ಸಂಜೆ 5-00 ಗಂಟೆ ಸಮಯದಲ್ಲಿ ಹಾಸನ ಬಿ.ಎಂ. ರಸ್ತೆ, ಕಸ್ತೂರವಳ್ಳಿ ಸಮೀಪವಿರುವ ಕಾವ್ಯ ಹೋಟೆಲ್ನಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾರೆಂದು ಶ್ರೀ ಕೆ.ಎನ್. ಹರೀಶ್, ಪಿಎಸ್ಐ, ಹಾಸನ ಬಡಾವಣೆ ಠಾಣೆ ರವರಿಗೆ ಬಂದು ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಯಾವುದೇ ಪರವಾನಗಿಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀ ಲೋಕೇಶ್ ಬಿನ್ ರಂಗೇಗೌಡ, 36 ವರ್ಷ, ಕಸ್ತೂರವಳ್ಳಿ ಗ್ರಾಮ, ಕಸಬಾ ಹೋಬಳಿ, ಹಾಸನ ತಾಲ್ಲೂಕು ಎಂದು ತಿಳಿಸಿದ್ದವನ್ನು ದಸ್ತಗಿರಿ ಮಾಡಿಕೊಂಡು ಮಾರಾಟಕ್ಕಿಟ್ಟಿದ್ದ ಸುಮಾರು3,652/- ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಹಾಸನ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.

ಲಾರಿ ಬೈಕ್ಗೆ ಡಿಕ್ಕಿ, ಬೈಕ್ ಸಾವರ ಸಾವು
ದಿನಾಂಕ: 12-01-2018 ರಂದು ಬೆಳಿಗ್ಗೆ 7-30 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಶ್ರವಣಬೆಳಗೊಳ ಹೋಬಳಿ, ಚಲ್ಯ ಗ್ರಾಮದ ವಾಸಿ ಶ್ರೀ ನಾಗಗೌಡ, ರವರ ಬಾಬ್ತು ಕೆಎ-11 ಎಕ್ಸ್-5966 ರ ಬೈಕ್ನಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಶ್ರವಣಬೆಳಗೊಳ-ಜುಟ್ಟನಹಳ್ಳಿ ರಸ್ತೆ, ಚಲ್ಯ ಗ್ರಾಮದ ಹತ್ತಿರ ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಲಾರಿಯ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ಗೆ ಡಿಕ್ಕಿ ಮಾಡಿದ ಪರಿಣಾಮ ಶ್ರೀ ನಾಗೇಗೌಡ, 72 ವರ್ಷ, ಚಲ್ಯ ಗ್ರಾಮ, ಶ್ರವಣಬೆಳಗೊಳ ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕು, ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಮೃತರ ಮಗ ಶ್ರೀ ಸುರೇಶ್, ರವರು ಕೊಟ್ಟ ದೂರಿನ ಮೇರೆಗೆ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಟ್ರ್ಯಾಕ್ಟರ್ ಡಿಕ್ಕಿ, ಪಾದಚಾರಿ ಸಾವು
ದಿನಾಂಕ: 13-01-2017 ರಂದು ಬೆಳಿಗ್ಗೆ 7-30 ಗಂಟೆ ಸಮಯದಲ್ಲಿ ಸಕಲೇಶಪುರ ತಾಲ್ಲೂಕು, ಜನ್ನಾಪುರ ಗ್ರಾಮದ ವಾಸಿ ಶ್ರೀ ರುದ್ರಪ್ಪ, ರವರು ಸಕಲೇಶಪುರ ತಾಲ್ಲೂಕು, ಆನೆಮಹಲ್ ಗ್ರಾಮದ ಪ್ರಜ್ಞಾ ಶಾಲೆಯ ಹತ್ತಿರ ನಡೆದುಕೊಂಡು ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಕೆಎ-46, 5931-32 ರ ಟ್ರ್ಯಾಕ್ಟರ್ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಶ್ರೀ ರುದ್ರಪ್ಪ, ರವರಿಗೆ ಡಿಕ್ಕಿ ಮಾಡಿದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಸಕಲೇಶಪುರ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ವೈದ್ಯರು ತಪಾಸಣೆ ನಡೆಸಿ ಶ್ರೀ ರುದ್ರಪ್ಪ ಬಿನ್ ಬೈರಪ್ಪ, ಜನ್ನಾಪುರ ಗ್ರಾಮ, ಸಕಲೇಶಪುರ ತಾಲ್ಲೂಕು ರವರು ಮೃತಪಟಿರುವುದಾಗಿ ತಿಳಿಸಿದ ಮೇರೆಗೆ ಮೃತರ ಶ್ರೀ ಪಾಲಕ್ಷ, ರವರು ಕೊಟ್ಟ ದೂರಿನ ಮೇರೆಗೆ ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಹುಡುಗಿ ಕಾಣೆ
ದಿನಾಂಕ: 10-01-2018 ರಂದು ಮಧ್ಯಾಹ್ನ 12-30 ಗಂಟೆ ಸಮಯದಲ್ಲಿ  ಹಾಸನ ತಾಲ್ಲೂಕು, ದುದ್ದ ಹೋಬಳಿ, ಬಿಟ್ಟಹಳ್ಳಿ ಗ್ರಾಮದ ವಾಸಿ ಶ್ರೀ ದೇವರಾಜು, ರವರ ಮಗಳು ಕು|| ರಂಜಿತಾ, ಗಂಡಸಿ ಹ್ಯಾಂಡ್ ಪೋಸ್ಟ್ ಗೆ ಹೋಗಿ ಬರುತ್ತೇನೆಂದು ಹೇಳಿ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ರಂಜಿತಾಳ ತಂದೆ ಶ್ರೀ ದೇವರಾಜು, ರವರು ಕೊಟ್ಟ ದೂರಿನ ಮೇರೆಗೆ ದುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಕು|| ರಂಜಿತಾ ಬಿನ್ ದೇವರಾಜು, 23 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣ ಮೈಕಟ್ಟು, ಮನೆಯಿಂದ ಹಸಿರು ಬಣ್ಣದ ಚೂಡಿದಾರ ಧರಿಸಿರುತ್ತಾಳೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ 08172-22935 ಕ್ಕೆ ಸಂಪರ್ಕಿಸುವುದು.



No comments: