* * * * * * HASSAN DISTRICT POLICE

Tuesday, January 30, 2018

PRESS NOTE 30-01-2018

                                          


             ¥ÀwæPÁ ¥ÀæPÀluÉ      ¢£ÁAPÀ: 30-01-2018.

ಕಾರು ಡಿವೈಡರ್ ಗೆ   ಡಿಕ್ಕಿ, ಒಬ್ಬರ ಸಾವು, ಇನ್ನೊಬರಿಗೆ ಗಾಯ

         ದಿನಾಂಕ: 30-01-2018 ರಂದು ಬೆಳಿಗ್ಗೆ 07-00 ಗಂಟೆ ಸಮಯದಲ್ಲಿ ತುಮಕೂರು ಜಿಲ್ಲೆ, ತುರುವೆಕೆರೆ ತಾಲ್ಲೂಕು, ಸಂಪಿಗೆ ಗ್ರಾಮದ ಸಂತೋಷ ರವರ ಬಾಬ್ತು  ಕೆಎ-06-ಪಿ-5236 ರ ಕಾರಿನಲ್ಲಿ ಪತ್ನಿ ಶೀತಲ್ ಮತ್ತು ಪ್ರಸಾದ್ ರವರೊಂದಿಗೆ ಹಾಸನಕ್ಕೆ ಸಂಬಂಧಿಕರ ಮನಗೆ ಹೋಗಿ ವಾಪಸ್ ಹಾಸನದಿಂದ ಊರಿಗೆ ಹೋಗಲು ಚನ್ನರಾಯಪಟ್ಟಣ ತಾಲ್ಲೂಕು, ಉದಯಪುರ ಹತ್ತಿರ ಇರುವ ಎ2ಬಿ ಹೋಟೆಲ್ ಹತ್ತಿರ ಎನ್ಹೆಚ್-75 ರಸ್ತೆಯಲ್ಲಿ  ಹೋಗುತ್ತಿದ್ದಾಗ ಸಂತೋಷ್ ಕಾರನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಹೋಗಿ  ರಸ್ತೆ ಮಧ್ಯೆ ಇರುವ ಡಿವೈಡರ್ ಮೇಲೆ ಹತ್ತಿಸಿದ ಪರಿಣಾಮ ಕಾರು ಪಲ್ಟಿಯಾಗಿ ರಸ್ತೆಗೆ ಬಿದ್ದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಚಿಕಿತ್ಸೆಗಾಗಿ ಹಾಸನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮದ್ಯೆ ಸಂತೋಷ್ ಬಿನ್ ಶ್ರೀನಿವಾಸ ಅಯ್ಯಂಗಾರ್, 25 ವರ್ಷ ರವರು ಮೃತಪಟ್ಟಿರುತ್ತಾರೆ. ಗಾಯಗೊಂಡಿದ್ದ ಸಂತೋಷ್ ರವರ ಪತ್ನಿ ಶೀತಲ್ ರವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಿರುತ್ತಾರೆಂದು ಶ್ರೀ ಪ್ರಸಾದ್ ರವರು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ. 

Monday, January 29, 2018

PRESS NOTE 29-01-2018

                                                       

   
                                          ಪತ್ರಿಕಾ ಪ್ರಕಟಣೆ                                 ದಿನಾಂಕ: 29-01-2018.

ಬೈಕ್ ಡಿಕ್ಕಿ, ಪಾದಚಾರಿ ಮಹಿಳೆ ಸಾವು:
     ದಿನಾಂಕ: 28-01-2018 ರಂದು ಬೆಳಿಗ್ಗೆ 5-30 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಮಾದಿಹಳ್ಳಿ ಹೋಬಳಿ, ಸವಾಸಿಹಳ್ಳಿ ಪೋಸ್ಟ್, ಶಿವಪುರ ಕಾವಲು ಗ್ರಾಮದ  ವಾಸಿ ಶ್ರೀಮತಿ ಚಂದ್ರಮ್ಮ, ರವರು ಅಕ್ಕನ ಮಗನಾದ ಶ್ರೀ ಸಿದ್ದೇಶ್, ಮತ್ತು ಗುರುಮೂತರ್ಿ, ರವರೊಂದಿಗೆ ಕೂಲಿ ಕೆಲಸಕ್ಕೆ ಹೋಗಲು ಹಾಸನ ತಾಲ್ಲೂಕು, ಹಾಸನ-ಬೇಲೂರು ರಸ್ತೆ, ಹರಳಹಳ್ಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಕೆಎ-46 ಹೆಚ್-5296 ರ ಬೈಕ್ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಶ್ರೀಮತಿ ಚಂದ್ರಮ್ಮ, ರವರಿಗೆ ಡಿಕ್ಕಿ ಮಾಡಿದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಳಾಗಿದ್ದು, ಚಿಕಿತ್ಸೆಗಾಗಿ ಹಾಸನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ತಪಾಸಣೆ ನಡೆಸಲಾಗಿ ಶ್ರೀಮತಿ ಚಂದ್ರಮ್ಮ ಕೋಂ ಪಾಪ, 50 ವರ್ಷ, ಶಿವಪುರ ಕಾವಲು ಗ್ರಾಮ, ಮಾದಿಹಳ್ಳಿ ಹೋಬಳಿ, ಬೇಲೂರು ತಾಲ್ಲೂಕು, ರವರು ಮೃತಪಟ್ಟಿರುವುದಾಗಿ ತಿಳಿಸಿದ ಮೇರೆಗೆ ಮೃತರ ಅಕ್ಕನ ಮಗನಾದ ಶ್ರೀ ಸಿದ್ದೇಶ್, ರವರು ಕೊಟ್ಟ ದೂರಿನ ಮೇರೆಗೆ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.

ಬೈಕ್ ಡಿಕ್ಕಿ ಪಾದಾಚಾರಿ ಸಾವು
      ದಿನಾಂಕ: 22-01-2018 ರಂದು ರಾತ್ರಿ 10-30 ಗಂಟೆ ಸಮಯದಲ್ಲಿ ಹೊಳೆನರಸೀಪುರ ತಾಲ್ಲೂಕು, ಕಸಬಾ ಹೋಬಳಿ, ಸಂಕನಹಳ್ಳಿ ಗ್ರಾಮದ  ಮಂಜುನಾಥ ರವರು ಹೊಳೆನರಸೀಪುರ ಪಟ್ಟಣ ಚಿಟ್ಟನಹಳ್ಳಿ ಬಡಾವಣೆಯಲ್ಲಿ ಕೆಲಸ ಮುಗಿಸಿ ಚಿಟ್ಟನಹಳ್ಳಿ ಬಡಾವಣೆಯ ಹತ್ತಿರ ಅರಕಲಗೂಡು ರಸ್ತೆಯಲ್ಲಿ ರಸ್ತೆ ಕ್ರಾಸ್ ಮಾಡುತ್ತಿದ್ದಾಗ ಹೊಳೆನರಸೀಪುರ ಕಡೆಯಿಂದ ಬಂದ  ಕೆಎ-13-ಇಸಿ-4967 ರ ಬೈಕ್ ಚಾಲಕ ತನ್ನ ಬೈಕ್ನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಚಿಕಿತ್ಸೆಗಾಗಿ ಹೊಳೆನರಸೀಪುರ ಸರ್ಕಾರಿ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಿ, ನಂತರ ಹಾಸನ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ, ವಾಪಸ್ ಹಾಸನ ಸಕರ್ಾರಿ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ; 28-01-2018 ರಂದು ಮಂಜುನಾಥ ಬಿನ್ ಲೇಟ್ ಪುಪ್ಪಯ್ಯ, 40 ವರ್ಷ ರವರು ಮೃತಪಟ್ಟಿರುತ್ತಾರೆಂದು ಮೃತರ ತಮ್ಮ ಶ್ರೀ ಶೇಖರ್ ರವರು ಕೊಟ್ಟ ದೂರಿನ ಮೇರೆಗೆ ಹೊಳೆನರಸೀಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.
ಮನುಷ್ಯ ಕಾಣೆ
     ಅರಸೀಕೆರೆ ತಾಲ್ಲೂಕು, ಜಾವಗಲ್ ಹೋಬಳಿ, ಬಕ್ಕಪ್ಪನಕೊಪ್ಪಲು ಗ್ರಾಮದ ಮಂಜಯ್ಯ ರವರು ಕಟ್ಟಿನ ಶಾಸ್ತ್ರವನ್ನು ಹೇಳಲು ಅರಸಿಕೆರೆ ತಾಲ್ಲೂಕು, ಸಕಲೇಶಪುರ ತಾಲ್ಲೂಕು ಮತ್ತು ಮೂಡಿಗೆರೆ ಕಡೆಗಳಿಗೆ ಹೋಗುತ್ತಿದ್ದು, ಒಂದು ವಾರ ಅಥವಾ 10 ದಿನಗಳು ಕಳೆದ ನಂತರ ವಾಪಸ್ ಮನೆಗೆ ಬರುತ್ತಿದ್ದವರು ಈಗ್ಗೆ 02 ತಿಂಗಳ ಹಿಂದೆ ದಿನಾಂಕ: 28-11-2017 ರಂದು ಬೆಳಿಗ್ಗೆ 09-00 ಗಂಟೆಗೆ ಎಂದಿನಂತೆ ತಮ್ಮ ಕಾಯಕವನ್ನು ಮಾಡಲು ಮನೆಯಿಂದ ಹೋದವರು 15 ದಿನಗಳು ಕಳೆದರೂ ಮನೆಗೆ ಬಂದಿರುವುದಿಲ್ಲ. ಎಲ್ಲಾ ಕಡೆ ಹುಡುಕಿದರು ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಮಂಜಯ್ಯ ರವರ ಮಗ ಶ್ರೀ ಗಣೇಶ ರವರು ದಿನಾಂಕ: 28-01-2018 ರಂದು ಕೊಟ್ಟ ದೂರಿನ ಮೇರೆಗೆ ಜಾವಗಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ.  ಕಾಣೆಯಾದ ವ್ಯಕ್ತಿಯ ಚಹರೆ: ಮಂಜಯ್ಯ, 67 ವರ್ಷ, 5 ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾರೆ. ಕಾಣೆಯಾದ  ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಲ್ಲಿ  ಹಾಸನ ಜಾವಗಲ್ ಠಾಣೆ ಫೋನ್ ನಂ. 08174-271221 ಕ್ಕೆ ಸಂಪರ್ಕಿಸುವುದು.

ಗಂಡಸು ಕಾಣೆ


    ದಿನಾಂಕ: 25-01-2018 ರಂದು ಬೆಳಿಗ್ಗೆ 08-00 ಗಂಟೆ ಸಮಯದಲ್ಲಿ ಅರಕಲಗೂಡು ತಾಲ್ಲೂಕು, ರಾಮನಾಥಪುರ ಹೋಬಳಿ, ಕೇರಳಾಪುರ ಸಂತೆಬೀದಿ ವಾಸಿ ದೇವರಾಜ ರವರು ಮನೆಯಿಂದ ರಾಮನಾಥಪುರಕ್ಕೆ ಹೋದವರು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ದೇವರಾಜ ರವರ ಅಣ್ಣ ಶ್ರೀ ನಿಂಗರಾಜ ರವರು ದಿನಾಂಕ: 28-01-2018 ರಂದು ಕೊಟ್ಟ ದೂರಿನ ಮೇರೆಗೆ ಕೊಣನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ವ್ಯಕ್ತಿಯ ಚಹರೆ: ದೇವರಾಜ ಬಿನ್ ಈರಪ್ಪ, 27 ವರ್ಷ, 5'3'' ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾರೆ. ಕಾಣೆಯಾದ ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಕೊಣನೂರು ಠಾಣೆ ಫೋನ್ ನಂ.  08175666227  ಕ್ಕೆ ಸಂಪರ್ಕಿಸುವುದು.

Sunday, January 28, 2018

PRESS NOTE : 28-01-2018

ಪತ್ರಿಕಾ ಪ್ರಕಟಣೆ         ದಿನಾಂಕ: 28-01-2018

ಮಟ್ಕಾ-ಜೂಜಾಡುತ್ತಿದ್ದವನ ಬಂಧನ, ಬಂಧಿತನಿಂದ ಸುಮಾರು 980/- ನಗದು ವಶ
     ದಿನಾಂಕ: 27-01-2018 ರಂದು ಮಧ್ಯಾಹ್ನ 2-50 ಗಂಟೆ ಸಮಯದಲ್ಲಿ ಹಾಸನದ ಪೆನ್ಷನ್ ಮೊಹಲ್ಲಾ ಠಾಣಾ ವ್ಯಾಪ್ತಿಯ ವಲ್ಲಬಾಯಿ ರಸ್ತೆ ಶಂಕರ್ನಾಗ್ ಆಟೋ ನಿಲ್ದಾಣದ ಹತ್ತಿರ ಸಾರ್ವಜನಿಕರನ್ನು ವಂಚಿಸುವ ಉದ್ದೇಶದಿಂದ 1 ರೂ 80 ರೂಪಾಯಿ ಕೊಡುವುದಾಗಿ ಮಟ್ಕಾ ಜೂಜಾಡುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀ ರಂಜು ಬಿನ್ ಕಾಳಪ್ಪ, 35 ವರ್ಷ, 3ನೇ ಕ್ರಾಸ್, ವಲ್ಲಬಾಯಿ ರಸ್ತೆ, ಹಾಸನ ನಗರ ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಮಟ್ಕಾ-ಜೂಜಾಟದಲ್ಲಿ ಪಣಕ್ಕಿಟ್ಟಿದ್ದ ಸುಮಾರು 980/- ನಗದನ್ನು   ನಗದನ್ನು ಅಮಾನತ್ತುಪಡಿಸಿಕೊಂಡು ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.
ಕಾರು ಪಲ್ಟಿ, ಒಂದು ಸಾವು 3 ಜನರಿಗೆ ಗಾಯ.
       ದಿನಾಂಕ: 27-01-2018 ರಂದು ಮಧ್ಯಾಹ್ನ 1-15 ಗಂಟೆ ಸಮಯದಲ್ಲಿ ಆಂದ್ರಪ್ರದೇಶ ರಾಜ್ಯ, ಗುಂಟೂರು ಜಿಲ್ಲೆ, ಗುಂಟೂರು ತಾಲ್ಲೂಕು, ಅಶೋಕನಗರ ವಾಸಿ ಶ್ರೀ ಕೃಷ್ಣ@ಭವಾನಿ ಕೃಷ್ಣ, ರವರು ಕೆಎ-53 ಎಂಇ-3224 ರ ಕಾರಿನಲ್ಲಿ ಸ್ನೇಹಿತರಾದ ಬೆಂಗಳೂರಿನ ಇಎಂಸಿ ಕಂಪನಿಯ ಕೆಲಸ ಮಾಡುತ್ತಿದ್ದ ಶ್ರೀ ರಾಕೇಶ್ ಮೂರ್ತಿ, ಶ್ರೀ ವಿಜಯಕುಮಾರಿ, ಸತೀಶ್ ರವರುಗಳೊಂದಿಗೆ ಹಾಸನ ಜಿಲ್ಲೆಯ ಆಲೂರು ಹತ್ತಿರವಿರುವ ಹೋಂ ಸ್ಟೇಗೆ ಹೋಗಲು ಹಾಸನ ತಾಲ್ಲೂಕು, ಶಾಂತಿಗ್ರಾಮ ಹೋಬಳಿ, ಮಡೆನೂರು ಗೇಟ್ ಎನ್ಹೆಚ್-75 ಬಿ.ಎಂ. ರಸ್ತೆಯಲ್ಲಿ ಹೋಗುತ್ತಿದ್ದಾಗ ಕಾರಿನಲ್ಲಿ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ರಸ್ತೆ ಪಕ್ಕದ ಹಳ್ಳಕ್ಕೆ ಪಲ್ಟಿಯಾದ ಪರಿಣಾಮ ಕಾರಿನಲ್ಲಿ ಶ್ರೀ ಕೃಷ್ಣ@ಭವಾನಿ ಕೃಷ್ಣ ಬಿನ್ ಕಾಳಿದಾಸ, 27 ವರ್ಷ, ಅಶೋಕನಗರ, ಗುಂಟೂರು ತಾಲ್ಲೂಕು ಗುಂಟೂರು ಜಿಲ್ಲೆ, ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ ಹಾಗೂ ಗಾಯಗೊಂಡ 3 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆಂದು ಮೃತರ ಸ್ನೇಹಿತರಾದ ಶ್ರೀ ರಾಕೇಶ್ ಮೂರ್ತಿ, ರವರು ಎನ್ ಡಿ. ಆರ್. ಕೆ. ಆಸ್ಪತ್ರೆಯಲ್ಲಿ ಕೊಟ್ಟ ಹೇಳಿಕೆ ಮೇರೆಗೆ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರರಕಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಹೆಂಗಸು ಕಾಣೆ
     ದಿನಾಂಕ: 15-12-2018 ರಂದು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ  ಚನ್ನರಾಯಪಟ್ಟಣದ ಅಗ್ರಹಾರ ಬೀದಿ ವಾಸಿ ಶ್ರೀ ರಾಮಕೃಷ್ಣ, ರವರ ಪತ್ನಿ ಶ್ರೀಮತಿ ಶೋಭಾ, ರವರು ಬೆಂಗಳೂರಿಗೆ ಕೆಲಸಕ್ಕೆ ಹೋಗುತ್ತೇನೆಂದು ಮನೆಯಲ್ಲಿ ಹೇಳಿ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀಮತಿ ಶೋಭಾ, ರವರ ಮಾವ ಶ್ರೀ ಚಿಕ್ಕಣ್ಣ, ರವರು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರರಕಣ ದಾಖಲಾಗಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ಶ್ರೀಮತಿ ಶೋಭಾ ಕೋಂ ರಾಮಕೃಷ್ಣ, 39 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಹಸಿರು ಬಣ್ಣದ ಚೂಡಿದಾರ ಧರಿಸಿರುತ್ತಾರೆಂದು ಈ ಹೆಂಗಸಿನ ಸುಳಿವು ಸಿಕ್ಕಲ್ಲಿ 08176-252333 ಕ್ಕೆ ಸಂಪರ್ಕಿಸುವುದು.

Saturday, January 27, 2018

PRESS NOTE : 27-01-2018

ಪತ್ರಿಕಾ ಪ್ರಕಟಣೆ                                                  ದಿನಾಂಕ: 27-01-2018.

ಬೈಕ್ನ ನಿಯಂತ್ರಣ ತಪ್ಪಿ, ವಿದ್ಯುತ್ ಲೈಟ್ ಕಂಬಕ್ಕೆ ಡಿಕ್ಕಿ, ಇಬ್ಬರ ಸಾವು:

      ದಿನಾಂಕ: 26-01-2018 ರಂದು ರಾತ್ರಿ 1-30 ಗಂಟೆ ಸಮಯದಲ್ಲಿ ಚಿಕ್ಕಮಗಳೂರು ಜಿಲ್ಲೆ, ಕಡೂರು ತಾಲ್ಲೂಕು, ಯಗಟಿ ಹೋಬಳಿ, ಎಳ್ಳಂಬಳ್ಸೆ ಗ್ರಾಮದ ವಾಸಿ ಶ್ರೀ ನಾಗರಾಜು  ರವರು ಸ್ನೇಹಿತರಾದ ಶ್ರೀ ಚಂದ್ರಶೇಖರ್, ರವರ ಬಾಬ್ತು ಕೆಎ-13 ವಿ-6738 ರ ಬೈಕ್ನಲ್ಲಿ ಕೆಲಸ ನಿಮಿತ್ತ ಆಲೂರಿಗೆ ಹೋಗಲು ಆಲೂರು ತಾಲ್ಲೂಕು, ಕಸಬಾ ಹೋಬಳಿ, ಭರತವಳ್ಳಿ ಕ್ರಾಸ್, ಎನ್ಹೆಚ್-75, ಬಿ,ಎಂ. ರಸ್ತೆಯಲ್ಲಿ ಹೋಗುತ್ತಿದ್ದಾಗ ಬೈಕ್ನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ವಿದ್ಯುತ್ ಲೈಟ್ ಕಂಬಕ್ಕೆ ಡಿಕ್ಕಿ ಮಾಡಿದ ಪರಿಣಾಮ ಶ್ರೀ ನಾಗರಾಜು ಬಿನ್ ಮಹೇಶಪ್ಪ, 33 ವರ್ಷ, ಎಳ್ಳಂಬಳ್ಸೆ ಗ್ರಾಮ, ಕಡೂರು ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ ಮತ್ತು ಶ್ರೀ ಚಂದ್ರಶೇಖರ್ ಬಿನ್ ತಮ್ಮಣ್ಣಯ್ಯ, 32 ವರ್ಷ, ಕೋರೆಹಳ್ಳಿ ಗ್ರಾಮ, ಕಸಬಾ ಹೋಬಳಿ, ಹಾಸನ ತಾಲ್ಲೂಕು ರವರುಗಳಿಗೆ ತೀವ್ರ ಸ್ವರೂಪದ ರಕ್ತಗಾಯಳಗಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಮೃತ ಶ್ರೀ ನಾಗರಾಜು, ರವರ ಪತ್ನಿ ಶ್ರೀಮತಿ ಛಾಯ, ರವರು ಕೊಟ್ಟ ದೂರಿನ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಅಪರಿಚಿತ ವಾಹನ ಬೈಕಿಗೆ ಡಿಕ್ಕಿ, ಹಳೆಬೀಡು ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ಸಾವು

    ದಿನಾಂಕ: 26-01-2018 ರಂದು ರಾತ್ರಿ 10-30 ಗಂಟೆ ಸಮಯದಲ್ಲಿ  ಅರಸೀಕೆರೆ ತಾಲ್ಲೂಕು, ಜಾವಗಲ್ ಹೋಬಳಿ, ಅರಕೆರೆ ಗ್ರಾಮದ ವಾಸಿ ಹಾಗೂ ಹಳೇಬೀಡು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಪಿಸಿ-278 ನಾಗರಾಜು ಎ.ಟಿ. ರವರು  ಹಳೇಬೀಡು ಠಾಣೆಯಲ್ಲಿ ರಾತ್ರಿ ಕರ್ತವ್ಯದಲ್ಲಿದ್ದು, ಮಾಯಗೋಡನಹಳ್ಳಿ ಗೇಟ್ ಹತ್ತಿರ ಗಲಾಟೆ ಸ್ಥಳಕ್ಕೆ ಹೋಗಿ ವಾಪಸ್ ಠಾಣೆಗೆ ಹೋಗಲು ಹಳೇಬೀಡು-ಜಾವಗಲ್ ರಸ್ತೆಯಲ್ಲಿ ಹಳೇಬೀಡು ಹತ್ತಿರದ ಯು.ಕೆ. ಡಾಬಾದ ಹತ್ತಿರ ತಮ್ಮ ಬಾಬ್ತು ಕೆಎ-13-ಇಎ-9183 ರ ಬೈಕಿನಲ್ಲಿ ಹೋಗುತ್ತಿದ್ದಾಗ ಯಾವುದೋ ಅಪರಿಚಿತ ವಾಹನದ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಗಳಾಗಿ  ನಾಗರಾಜು ಎ.ಟಿ. ಬಿನ್ ತೀರ್ಥಕುಮಾರ್, 30 ವರ್ಷ, ಸಿಪಿಸಿ-278, ಹಳೇಬೀಡು ಪೊಲೀಸ್ ಠಾಣೆ ರವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆಂದು ಮೃತರ ತಂದೆ ಶ್ರೀ ತೀರ್ಥಕುಮಾರ್ ರವರು ಕೊಟ್ಟ ದೂರಿನ ಮೇರೆಗೆ ಹಳೇಬೀಡು ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.
ಗಂಡಸು ಕಾಣೆ
     ದಿನಾಂಕ: 25-01-2018 ರಂದು ಮಧ್ಯಾಹ್ನ 4-30 ಗಂಟೆ ಸಮಯದಲ್ಲಿ  ಹಾಸನ ತಾಲ್ಲೂಕು, ಕಸಬಾ ಹೋಬಳಿ, ಹೊಳೆನರಸೀಪುರ ರಸ್ತೆ, ಚನ್ನಪಟ್ಟಣದ ಬ್ರಾಹ್ಮಣರ ವಠಾರದ ವಾಸಿ ಶ್ರೀ ವೇಲಾಯುಧನ್, ರವರು ಮನೆಯಿಂದ ಹೊರಗೆ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀ ವೇಲಾಯುಧನ್, ರವರ ಪತ್ನಿ ಶ್ರೀಮತಿ ಸರಸ್ವತಿ, ರವರು ಕೊಟ್ಟ ದೂರಿನ ಮೇರೆಗೆ ಹಾಸನ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ವ್ಯಕ್ತಿಯ ಚಹರೆ: ಶ್ರೀ ವೇಲಾಯುಧನ್, 52 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣ ಮೈಕಟ್ಟು, ಮನೆಯಿಂದ ಹೋಗುವಾಗ ಬಿಳಿ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿರುತ್ತಾರೆ. ಈ ವ್ಯಕ್ತಿಯ ಸುಳಿವು ಸಿಕ್ಕಲ್ಲಿ  ಹಾಸನ ಬಡಾವಣೆ ಠಾಣೆ ಫೋನ್ ನಂ. 08172-268967 ಕ್ಕೆ ಸಂಪರ್ಕಿಸುವುದು.PRESS NOTE 26-01-2018

ಪತ್ರಿಕಾ ಪ್ರಕಟಣೆ         ದಿನಾಂಕ: 26-01-2018

ಪೆಟ್ರೋಲ್ ಟ್ಯಾಂಕರ್ ಲಾರಿ ಡಿಕ್ಕಿ ಪಾದಾಚಾರಿ ಸಾವು


    ದಿನಾಂಕ: 25-01-2018 ರಂದು ರಾತ್ರಿ 08-00 ಗಂಟೆ ಸಮಯದಲ್ಲಿ  ಅರಸೀಕೆರೆ ತಾಲ್ಲೂಕು, ಬಾಣಾವರ ಪೇಟೆ ಮಸೀದಿ ಹತ್ತಿರ ವಾಸಿ ಸಾಬುಲಾಲ್ ಸಾಬ್ ರವರು  ತಮ್ಮ ಮಗ ಆದಿಲ್ರವರೊಂದಿಗೆ ಅರಸೀಕೆರೆಗೆ ಹೋಗಲು ಬಾಣಾವರ ಯಮಹ ಶೋ ರೂಂ ಮುಂಭಾಗದ ಎನ್ಹೆಚ್-206 ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಅರಸೀಕೆರೆ ಕಡೆಯಿಂದ ಶಿವಮೊಗ್ಗ ಕಡೆಗೆ ಹೋಗಲು ಬರುತ್ತಿದ್ದ ಕೆಎ-01-ಎಸಿ-1539 ರ ಪೆಟ್ರೋಲ್ ಟ್ಯಾಂಕರ್ ಲಾರಿಯ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಚಿಕಿತ್ಸೆಗಾಗಿ ಅರಸೀಕೆರೆ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾಬು ಲಾಲ್ ಸಾಬ್, 60 ವರ್ಷ ರವರು ಮೃತಪಟ್ಟಿರುತ್ತಾರೆಂದು ಮೃತರ ಮಗ ಶ್ರೀ ಆದಿಲ್ ರವರು ಕೊಟ್ಟ ದೂರಿನ ಮೇರೆಗೆ ಬಾಣಾವರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ. 

Thursday, January 25, 2018

PRESS NOTE 25-01-2018                                                       ಪತ್ರಿಕಾ ಪ್ರಕಟಣೆ                               ದಿನಾಂಕ: 25-01-2018.
ಕಾರು ಮರಕ್ಕೆ ಡಿಕ್ಕಿ ಮೂವರ ದಾರುಣ ಸಾವು, ಉಳಿದವರಿಗೆ ಸಣ್ಣಪುಟ್ಟ ಗಾಯ
        ದಿನಾಂಕ: 24-01-2018 ರಂದು ಬೆಳಿಗ್ಗೆ 11-30 ಗಂಟೆ ಸಮಯದಲ್ಲಿ ತುಮಕೂರು ಜಿಲ್ಲೆ ತುರವೆಕೆರೆ ತಾಲ್ಲೂಕುಸುಬ್ರಹ್ಮಣ್ಯನಗರ ವಾಸಿ ಸುಪ್ರೀತ್ ರವರು ತಮಗೆ ಮದುವೆ ನಿಶ್ಚಯವಾಗಿದ್ದ  ಬಾಗೂರು ಗ್ರಾಮದ ರಾಧಿಕಾ ರವರೊಂದಿಗೆ ಪ್ರೀ ವೆಡ್ಡಿಂಗ್ ಫೋಟೋ ತೆಗೆಸಿಕೊಳ್ಳಲು ರಾಧಿಕಾ, ರಾಧಿಕಾ ರವರ ಅಣ್ಣ ಪ್ರಭುದೇವ್, ತಾಯಿ, ಶಶಿಕಲಾ, ಫೋಟೋಗ್ರಾಪರ್ ಮಾರುತಿ, ಮೇಕರ್ ಶಿಲ್ಪ ಹಾಗೂ ಇನ್ನೊಬ್ಬ ಫೋಟೋಗ್ರಾಫರ್ ಅಜಯ್ಕುಮಾರ್ ರವರುಗಳೊಂದಿಗೆ ಎಲ್ಲರೂ ಕೆಎ-41-ಎನ್-1242 ರ ಕಾರಿನಲ್ಲಿ ಪ್ರಭುದೇವ್ ರವರ ಕಾರು ಚಾಲನೆ ಮಾಡಿಕೊಂಡು ತುಮಕೂರಿನಿಂದ ಸಕಲೇಶಪುರಕ್ಕೆ ಹೋಗಲು ಆಲೂರು ತಾಲ್ಲೂಕು, ಪಾಳ್ಯ ಗ್ರಾಮದ ಹತ್ತಿರ ಎನ್ಹೆಚ್-75 ಬಿ.ಎಂ. ರಸ್ತೆಯಲ್ಲಿ ಹೋಗುತ್ತಿದ್ದಾಗ ಕಾರಿನ ಚಾಲಕ ತನ್ನ ಕಾರನ್ನು ನಿರ್ಲಕ್ಷ್ಯತೆಯಿಂದ  ಓಡಿಸಿಕೊಂಡು ಹೋಗಿ ರಸ್ತೆಯ ಎಡ ಬದಿಯ ಮರಕ್ಕೆ ಡಿಕ್ಕಿ ಮಾಡಿ ಅಲ್ಲೆ ಮರದ ಪಕ್ಕ ನಿಂತಿದ್ದ ಒಂದು ಹೆಂಗಸಿಗೆ ಡಿಕ್ಕಿ ಮಾಡಿದ ಪರಿಣಾಮ  ಕಾರು ಪಲ್ಟಿಯಾಗಿ ರಸ್ತೆಗೆ ಬಿದ್ದಿತು. ಆಗ ರಸ್ತೆಯ ಎಡಭಾಗದಲ್ಲಿ ನಿಂತಿದ್ದ ಹೆಂಗಸು ರತ್ನಮ್ಮ, 50 ವರ್ಷ, ಹೂವಿನಹಳ್ಳಿ ಗ್ರಾಮ, ಹಾಸನ ತಾಲ್ಲೂಕು ರವರು ಸ್ಥಳದಲ್ಲಿಯೇ ಮೃತಪಟ್ಟರು. ಕಾರಿನಲ್ಲಿದ್ದ ರಾಧಿಕಾ, 21 ವರ್ಷ ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟರು. ಕಾರಿನಲ್ಲಿದ್ದ ಸುಪ್ರೀತ್, ಶಶಿಕಲಾ ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿಚಿಕಿತ್ಸೆಗಾಗಿ ಹಾಸನ ಜನಪ್ರಿಯ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸುಪ್ರೀತ್, 27 ವರ್ಷ ರವರು ಮೃತಪಟ್ಟಿರುತ್ತಾರೆ.ಕಾರಿನಲ್ಲಿದ್ದ ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿ ಆಲೂರು ಸರ್ಕಾರಿ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆದುಕೊಂಡಿರುತ್ತಾರೆಂದು ಪ್ರತ್ಯಕ್ಷದಶರ್ಿ ಶ್ರೀ ಮಾರುತಿ ರವರು ಕೊಟ್ಟ ದೂರಿನ ಮೇರೆಗೆ ಆಲೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.  

ಅಪರಿಚಿತ ವಾಹನ ಬೈಕಿಗೆ ಡಿಕ್ಕಿ, ಪೊಲೀಸ್ ಹೆಡ್ಕಾನ್ಸ್ಟೇಬಲ್ ರವರ ಸಾವು
ದಿನಾಂಕ: 24-01-2018 ರಂದು ರಾತ್ರಿ 09-45 ಗಂಟೆ ಸಮಯದಲ್ಲಿ  ಹಾಸನ ತಾಲ್ಲೂಕು, ಕಸಬಾ ಹೋಬಳಿ, ಬಿ.ಕಾಟೀಹಳ್ಳಿ ಗ್ರಾಮದ ವಾಸಿ ಹಾಗೂ ಜಾವಗಲ್ ಪೊಲೀಸ್ ಠಾಣೆಯಲ್ಲಿ ಹೆಡ್ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಸೋಮಶೇಖರ್ ಕೆ.ವಿ. ರವರು ಠಾಣೆಯಲ್ಲಿ ಕೆಲಸವನ್ನು ನಿರ್ವಹಿಸಿಕೊಂಡು ನಂತರ ಸಮನ್ಸ್ ಜಾರಿಯ ಬಗ್ಗೆ ಹಳೇಬೀಡು ಠಾಣೆಗೆ ಹೋಗಿ ಸಮನ್ಸ್ ಜಾರಿ ಮಾಡಿಕೊಂಡು ನಂತರ ತಮ್ಮ ಬಾಬ್ತು ಕೆಎ-13-ಇಎ-4333 ರ ಹಿರೋಹೊಂಡಾ ಶೈನ್ ಬೈಕಿನಲ್ಲಿ ಹಳೇಬೀಡು-ಹಾಸನ ರಸ್ತೆಯ ಕೊಂಡಜ್ಜಿಕೊಪ್ಪಲು  ಗಡಿಯ ರಸ್ತೆಯ ಮುಂದೆ  ಹಾಸನದ  ಕಡೆಗೆ ರಸ್ತೆಯ ಎಡಬದಿಯಲ್ಲಿ ಹೋಗುತ್ತಿದ್ದಾಗ ಹಾಸನದ ಕಡೆಯಿಂದ ಬಂದ ಯಾವುದೋ ವಾಹನದ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕಿಗೆ ಡಿಕ್ಕಿ ಮಾಡಿದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಶ್ರೀ ಸೋಮಶೇಖರ್ ಬಿನ್ ವೈರಮುಡಿಗೌಡ, 45 ವರ್ಷ, ಹೆಡ್ಕಾನ್ಸ್ಟೇಬಲ್, ಜಾವಗಲ್ ಪೊಲೀಸ್ ಠಾಣೆ ರವರು  ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆಂದು ಮೃತರ ತಮ್ಮ ಶ್ರೀ ಪುರುಷೋತ್ತಮ ಕೆ.ವಿ. ರವರು ಕೊಟ್ಟ ದೂರಿನ ಮೇರೆಗೆ ಹಾಸನ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.

ಮನುಷ್ಯ ಕಾಣೆ
      ಹಾಸನ ನಗರ, ಕೆ.ಆರ್. ಪುರಂ, 9 ನೇ ಕ್ರಾಸ್ವಾಸಿ ಸೋಮಶೇಖರ್ ಹೆಚ್. ಕೆ. ರವರು ಎಲೆಕ್ಟ್ರಿಕಲ್ ಹೋಲ್ಸೇಲ್ ಡೀಲರ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಹಾಗೂ ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ಒಂದು ಗೋಡನ್ ಸಹ ಮಾಡಿಕೊಂಡಿದ್ದು, ಹಾಸನದಲ್ಲಿ ವಾಸವಾಗಿದ್ದರು.  ಬೆಂಗಳೂರಿಗೆ ಕೆಲಸಕ್ಕಾಗಿ ಹೋಗಿ ಬರುತ್ತಿದ್ದರು. ದಿನಾಂಕ: 23-01-2018 ರಂದು ಬೆಳಿಗ್ಗೆ 07-00 ಗಂಟೆ ಸಮಯದಲ್ಲಿ ಬೆಂಗಳೂರಿಗೆ ಹೋಗಿ ಬರುವುದಾಗಿ ಮನೆಯಿಂದ ಹೋದವರು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ ಪತ್ತೆ ಮಾಡಿಕೊಡಬೇಕೆಂದು ಸೋಮಶೇಖರ್ ಹೆಚ್.ಕೆ. ರವರ ಪತ್ನಿ ಶ್ರೀಮತಿ ಶಶಿಕಲಾ ರವರು ಕೊಟ್ಟ ದೂರಿನ ಮೇರೆಗೆ ಹಾಸನ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ವ್ಯಕ್ತಿಯ ಚಹರೆ: ಸೋಮಶೇಖರ್ ಹೆಚ್.ಕೆ., 50 ವರ್ಷ, 5'5'' ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾರೆ. ಕಾಣೆಯಾದ ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಹಾಸನ ಬಡಾವಣೆ ಠಾಣೆ  ಫೋನ್ ನಂ. 08172-268967 ಕ್ಕೆ ಸಂಪರ್ಕಿಸುವುದು.

ಹುಡುಗಿ ಕಾಣೆ          ದಿನಾಂಕ: 08-01-2018 ರಂದು ಬೆಳಿಗ್ಗೆ 09-15 ಗಂಟೆ ಸಮಯದಲ್ಲಿ  ಅರಕಲಗೂಡು ತಾಲ್ಲೂಕು, ರಾಮನಾಥಪುರ ಹೋಬಳಿ, ರಘುಪತಿಕೊಪ್ಪಲು ಗ್ರಾಮದ ವಾಸಿ ಮಹದೇವ ಹೆಚ್.ಜೆ. ರವರ ಮಗಳು ಹರ್ಷಿತ ಹೆಚ್.ಎಂ. ಎಂದಿನಂತೆ ಕೊಣನೂರಿಗೆ ಕಾಲೇಜಿಗೆ ಹೋಗುವುದಾಗಿ ಮನೆಯಿಂದ ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಹರ್ಷಿತ ಹೆಚ್.ಎಂ. ರವರ ತಂದೆ ಶ್ರೀ ಮಹದೇವ ಹೆಚ್.ಜೆ. ರವರು ದಿನಾಂಕ: 24-01-2018 ರಂದು ಕೊಟ್ಟ ದೂರಿನ ಮೇರೆಗೆ ಕೊಣನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಹರ್ಷಿತ ಹೆಚ್.ಎಂ. ಬಿನ್ ಮಹದೇವ ಹೆಚ್.ಜೆ.  20 ವರ್ಷ, 5'3'' ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾಳೆ. ಕಾಣೆಯಾದ ಹುಡುಗಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಕೊಣನೂರು ಠಾಣೆ ಫೋನ್ ನಂ.  08175-226227  ಕ್ಕೆ ಸಂಪರ್ಕಿಸುವುದು.