* * * * * * HASSAN DISTRICT POLICE

Thursday, December 7, 2017

PRESS NOTE : 07-12-2017

ಪತ್ರಿಕಾ ಪ್ರಕಟಣೆ               ದಿನಾಂಕ: 07-12-2017
ಮಟ್ಕಾ ಜೂಜಾಡುತ್ತಿದ್ದವನ ಬಂಧನ, ಬಂಧಿತನಿಂದ 2,260/- ನಗದು ವಶ
        ದಿನಾಂಕ: 06-12-2017 ರಂದು ಮಧ್ಯಾಹ್ನ 12-30 ಗಂಟೆ ಸಮಯದಲ್ಲಿ ಹಾಸನ ನಗರ ಚಿಪ್ಪಿನಕಟ್ಟೆಯ ಬೆಸ್ತರ ಬೀದಿ, 1 ನೇ ಕ್ರಾಸ್ನಲ್ಲಿರುವ ವಾಜಿದ್ ರವರ ಅಂಗಡಿ ಮುಂಭಾಗದಲ್ಲಿರುವ ಸಾರ್ವಜನಿಕ ರಸ್ತೆಯಲ್ಲಿ  ಮಟ್ಕಾ ಜೂಜಾಟ ಆಡುತ್ತಿದ್ದಾರೆಂದು ಪಿಐ  ಶ್ರೀ ಸತೀಶ್ ಡಿ.  ಹಾಸನ ಸಿಇಎನ್ ಕ್ರೈಂ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಮಟ್ಕಾ ಜೂಜಾಟ ಆಡುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ  ರಫೀಕ್ ಅಹಮದ್ ಬಿನ್ ಲೇಟ್ ಯೂಸೂಫ್, 46 ವರ್ಷ, ಚಿಪ್ಪಿನಕಟ್ಟೆ, ಹಾಸನ ನಗರ ಎಂದು ತಿಳಿಸಿದವನನ್ನು ದಸ್ತಗಿರಿ ಮಾಡಿಕೊಂಡು ಮಟ್ಕಾ ಜೂಜಾಟದಿಂದ ಗಳಿಸಿದ್ದ 2260/- ನಗದನ್ನು ಅಮಾನತ್ತುಪಡಿಸಿಕೊಂಡು ಹಾಸನ ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.
ಬೈಕ್ ನಿಯಂತ್ರಣ ತಪ್ಪಿ ಬೈಕಿನಿಂದ ಬಿದ್ದು ಬೈಕ್ ಸವಾರನ ಸಾವು
        ದಿನಾಂಕ: 05-12-2017 ರಂದು ರಾತ್ರಿ 09-30 ಗಂಟೆ ಸಮಯದಲ್ಲಿ ಸಕಲೇಶಪುರ ತಾಲ್ಲೂಕು, ಹಲಸುಲಿಗೆ ಗ್ರಾಮದ  ಅನಿಲ್ಕುಮಾರ್ ರವರ ಬಾಬ್ತು ಕೆಎ-46-ಜೆ-5872 ರ ಫ್ಯಾಷನ್ ಪ್ರೋ ಬೈಕಿನಲ್ಲಿ ಅರೇಹಳ್ಳಿಯಿಂದ ಸಕಲೇಶಪುರಕ್ಕೆ ಹೋಗಲು ಅರೇಹಳ್ಳಿ-ಸಕಲೇಶಪುರ ರಸ್ತೆಯ ತಿರುವ ರಸ್ತೆಯಲ್ಲಿ ಬೈಕ್ನ್ನು ನಿರ್ಲಕ್ಷ್ಯತೆಯಿಂದ  ಓಡಿಸಿಕೊಂಡು ಹೋಗುತ್ತಿದ್ದಾಗ ಬೈಕ್ನ ನಿಯಂತ್ರಣ ತಪ್ಪಿ ಬೈಕ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಗಳಾಗಿ  ಅನಿಲ್ಕುಮಾರ್ ಬಿನ್ ವಿರೂಪಾಕ್ಷ ಕೆ.ಎಸ್. 24 ವರ್ಷ ರವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆಂದು ಮೃತರ ತಮ್ಮ ಶ್ರೀ ಸುನಿಲ್ಕುಮಾರ್ ರವರು ಕೊಟ್ಟ ದೂರಿನ ಮೇರೆಗೆ  ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.
ಬೈಕ್ಗಳ ಮುಖಾಮುಖಿ ಡಿಕ್ಕಿ ಒಬ್ಬರ ಸಾವು

        ದಿನಾಂಕ: 04-12-2017 ರಂದು ರಾತ್ರಿ 10-00 ಗಂಟೆ ಸಮಯದಲ್ಲಿ ಅರಕಲಗೂಡು ತಾಲ್ಲೂಕು, ಕೊಣನೂರು ಹೋಬಳಿ, ರಂಗನಾಥಪುರ ಗ್ರಾಮದ ಕೃಷ್ಣಮೂತರ್ಿ ರವರ ಬಾಬ್ತು ಕೆಎ-13-ಇ-9359 ರ ಬೈಕಿನಲ್ಲಿ ಸಂಬಂಧಿಕರ ಮನೆಗೆ ಹೋಗಲು ಅರಕಲಗೂಡು ರಸ್ತೆಯಲ್ಲಿ ನೇರಲಹಳ್ಳಿ ಗ್ರಾಮದ ಸರ್ಕಲ್ ಹತ್ತಿರ ಹೋಗುತ್ತಿದ್ದಾಗ  ಎದುರುಗಡೆಯಿಂದ ಬಂದ ಕೆಎ-13-ಇಜೆ-6297 ರ ಬೈಕ್ ಚಾಲಕ ತನ್ನ ಬೈಕ್ನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ  ಬೈಕ್ ಸಮೇತ ರಸ್ತೆಗೆ ಬಿದ್ದು, ತೀವ್ರ ಸ್ವರೂಪದ ರಕ್ತಗಾಯಗಳಾಗಿ ಚಿಕಿತ್ಸೆಗಾಗಿ ಅರಕಲಗೂಡು ಸಕರ್ಾರಿ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಕೃಷ್ಣಮೂತರ್ಿ, 32 ವರ್ಷ ರವರು ಮೃತಪಟ್ಟಿರುತ್ತಾರೆಂದು ಮೃತರ ಸಂಬಂಧಿ ಶ್ರೀ ಕುಮಾರ ರವರು ಕೊಟ್ಟ ದೂರಿನ ಮೇರೆಗೆ  ಅರಕಲಗೂಡು ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ. 

No comments: