* * * * * * HASSAN DISTRICT POLICE

Monday, December 4, 2017

PRESS NOTE : 01-12-2017

ಪತ್ರಿಕಾ ಪ್ರಕಟಣೆ                   ದಿನಾಂಕ: 01-12-2017
ಜೂಜಾಡುತ್ತಿದ್ದ 6 ಜನರ ಬಂಧನ, ಬಂಧಿತರಿಂದ  5,500/- ನಗದು ವಶ
      ದಿನಾಂಕ: 30-11-2017 ರಂದು ಮಧ್ಯಾಹ್ನ 01-30 ಗಂಟೆ ಸಮಯದಲ್ಲಿ  ಹಾಸನ ತಾಲ್ಲೂಕು, ಹರಳಹಳ್ಳಿ ಗ್ರಾಮದ ಸಕರ್ಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಂಭಾಗದ ಕಾಂಪೌಂಡ್ ಬಳಿ ಜನರು ಗುಂಪುಕಟ್ಟಿಕೊಂಡು ಒಳಗೆ 30, ಹೊರಗೆ 30 ರೂ ಎಂದು ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆಂದು ಪಿಐ ಶ್ರೀ ಸತೀಶ್, ಡಿ. ಹಾಸನ ಸಿಇಎನ್ ಕ್ರೈಂ ಪೊಲೀಸ್ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಟ ಆಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ದಿಲೀಪ್ ಬಿನ್ ಲೇಟ್ ಮಂಜೇಗೌಡ, 38 ವರ್ಷ, ಹರಳಹಳ್ಳಿ ಗ್ರಾಮ ಹಾಸನ ತಾಲ್ಲೂಕು 2) ಸಂತೋಷ  ಬಿನ್ ಕೃಷ್ಣೇಗೌಡ, 38 ವರ್ಷ, ಹರಳಹಳ್ಳಿ ಗ್ರಾಮ 3) ಧರ್ಮ 37 ವರ್ಷ, ಹರಳಹಳ್ಳಿ ಗ್ರಾಮ 4) ಹೇಮಂತ 25 ವರ್ಷ, ಮಣಚನಹಳ್ಳಿ ಗ್ರಾಮ ಹಾಸನ ತಾಲ್ಲೂಕು 5) ಗಣೇಶ ಬಿನ್ ಮಂಜೇಗೌಡ, 42 ವರ್ಷ, ಹರಳಹಳ್ಳಿ ಗ್ರಾಮ, ಹಾಸನ ತಾಲ್ಲೂಕು 5) ಗಣೇಶ, 42 ವರ್ಷ ಹರಳಹಳ್ಳಿ ಗ್ರಾಮ, ಹಾಸನ ತಾಲ್ಲೂಕು 6) ಮಂಜೇಗೌಡ ಬಿನ್ ಲೇಟ್ ತಿರುಮಲೇಗೌಡ, 60 ವರ್ಷ, ಹರಳಹಳ್ಳಿ ಗ್ರಾಮ, ಹಾಸನ ತಾಲ್ಲೂಕು ಎಂದು ತಿಳಿಸಿದವರನ್ನು ದಸ್ತಗಿರಿ ಮಾಡಿಕೊಂಡು  ಅವರ ವಶದಲ್ಲಿದ್ದ 5500/- ನಗದನ್ನು ಅಮಾನತ್ತುಪಡಿಸಿಕೊಂಡು  ಹಾಸನ ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
ಹುಡುಗಿ ಕಾಣೆ

        ದಿನಾಂಕ: 28-11-2017 ರಂದು ರಾತ್ರಿ 08-00 ಗಂಟೆ ಸಮಯದಲ್ಲಿ  ಹೊಳೆನರಸೀಪುರ ತಾಲ್ಲೂಕು, ಹಳ್ಳಿಮೈಸೂರು ಹೋಬಳಿ, ಬೇಡಿಗನಹಳ್ಳಿ ಗ್ರಾಮದ  ಶಿವಪ್ಪ ರವರ ಮಗಳು ಅನುಷಾ ಬಿ.ಎಸ್.  ಹೊಳೆನರಸೀಪುರ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ಬಿಕಾಂ ಓದುತ್ತಾ ಮಹಿಳಾ ಹಾಸ್ಟೇಲ್ನಲ್ಲಿದ್ದವಳು ಫೋನ್ ನಲ್ಲಿ ಊರಿಗೆ ಬುರುವುದಾಗಿ ಹೇಳಿದವಳು ಊರಿಗೆ ಬರದೆ ಹಾಸ್ಟೇಲ್ನಲ್ಲಿ  ಇರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಅನುಷಾ ಬಿ.ಎಸ್. ರವರ ತಂದೆ ಶ್ರೀ ಶಿವಪ್ಪ ರವರು ದಿನಾಂಕ: 30-11-2017 ರಂದು ಕೊಟ್ಟ ದೂರಿನ ಮೇರೆಗೆ ಹೊಳೆನರಸೀಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಅನುಷಾ ಬಿ.ಎಸ್. ಬಿನ್ ಶಿವಪ್ಪ,  19 ವರ್ಷ, 5'2'' ಅಡಿ ಎತ್ತರ, ಕನ್ನಡ ಮತ್ತು ಇಂಗ್ಲೀಷ್ ಭಾಷೆ ಮಾತನಾಡುತ್ತಾಳೆ. ಕಾಣೆಯಾದ ಹುಡುಗಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಹೊಳೆನರಸೀಪುರ ನಗರ ಠಾಣೆ ಫೋನ್ ನಂ. 08175-273333 ಕ್ಕೆ ಸಂಪರ್ಕಿಸುವುದು.

No comments: