* * * * * * HASSAN DISTRICT POLICE

Monday, November 13, 2017

PRESS NOTE : 13-11-2017

ಪತ್ರಿಕಾ ಪ್ರಕಟಣೆ    ದಿನಾಂಕ: 13-11-2017.

ಕಾರುಗಳ ಡಿಕ್ಕಿ, ಮಹಿಳೆ ಸಾವು:

     ದಿನಾಂಕ: 13-11-2017 ರಂದು ಬೆಳಗಿನ ಜಾವ 4-00 ಗಂಟೆ ಸಮಯದಲ್ಲಿ #5/25, 4ನೇ ಕ್ರಾಸ್, ಮರುತಿ ಬಡಾವಣೆ, ಹೊಸಬಡಾವಣೆ, ಮಡಿವಾಳ ಬೆಂಗಳೂರು ನಗರ ವಾಸಿ ಶ್ರೀ ಎಸ್. ಸತೀಶ್, ರವರು ಪತ್ನಿ ಶ್ರೀಮತಿ ಕುಸುಮ ಅತ್ತೆ ಶ್ರೀಮತಿ ವರಲಕ್ಷ್ಮೀ, ನಾದಿನಿ ಶ್ರೀಮತಿ ಚಂದ್ರಿಕಾ ಮತ್ತು ನಾದಿನಿ ಮಕ್ಕಳಾದ ಶ್ರೀ ಲಕ್ಷ್ಯ ಮತ್ತು ಮಿಲನ್ ಬಾಲಾಜಿಯವರೊಂದಿಗೆ ಕೆಎ-07 ಎನ್-9729 ರ ಸ್ಟ್ಯಾಂಟ್ರೋ ಕಾರಿನಲ್ಲಿ ಧರ್ಮಸ್ಥಳ ಕುಕ್ಕೆ ಸುಬ್ರಮಣ್ಯ ಶೃಂಗೇರಿ ದೇವಸ್ಥಾನಕ್ಕೆ ಹೋಗಿ ವಾಪಸ್ ಚನ್ನರಾಯಪಟ್ಟಣ ತಾಲ್ಲೂಕು, ಎನ್ಹೆಚ್-75, ಗುಲಸಿಂದ ಬೈಪಾಸ್ ಹತ್ತಿರ ನಿಲ್ಲಿಸಿದಾಗ ಹಿಂಭಾಗದಿಂದ ಬಂದ ಕೆಎ-11 ಎ-4671 ರ ಟಾಟಾ ಇಂಡಿಕಾ ಕಾರಿನ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಕೆಎ-07 ಎನ್-9729 ರ ಕಾರಿನ ಹಿಂಭಾಗಕ್ಕೆ ಡಿಕ್ಕಿ ಮಾಡಿದ ಪರಿಣಾಮ ಎರಡು ಕಾರುಗಳು ಜಖಂಗೊಂಡು ಕಾರಿನಲ್ಲಿದ್ದವರಿಗೆ ರಕ್ತಗಾಯಗಳಾಗಿದ್ದು, ಕೆಎ-11 ಎ-4671 ರ ಟಾಟಾ ಇಂಡಿಕಾ ಕಾರಿನ ಹಿಂಭಾಗದಲ್ಲಿ ಕುಳಿತಿದ್ದ ಶ್ರೀಮತಿ ಮಾಲತಿ, ರವರಿಗೆ ತೀವ್ರ ಸ್ವರೂಪದ ರಕ್ತಗಾಯಳಾಗಿದ್ದು, ಚಿಕತ್ಸೆಗಾಗಿ ಚನ್ನರಾಯಪಟ್ಟಣ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಶ್ರೀಮತಿ ಮಾಲತಿ ಕೋಂ ಪರುಶುರಾಮ್, 36 ವರ್ಷ, ಬೆಲಗಾಡಿ ಗ್ರಾಮ, ಗದಗ್ ತಾಲ್ಲೂಕು, ಮಾರ್ಗಮಧ್ಯೆ ಮೃತಪಟ್ಟಿರುತ್ತಾರೆಂದು ಪ್ರತ್ಯಕ್ಷದಶರ್ಿ ಶ್ರೀ ಸತೀಶ್, ರವರು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಬೈಕ್ ಕೆಎಸ್ಆರ್ಟಿಸಿ ಬಸ್ಗೆ ಡಿಕ್ಕಿ ಬೈಕ್ ಸವಾರ ಸಾವು:


     ದಿನಾಂಕ: 12-11-2017 ರಂದು ಮಧ್ಯಾಹ್ನ 1-00 ಗಂಟೆ ಸಮಯದಲ್ಲಿ ಮಹಾಲಕ್ಷ್ಮೀ ಬಡಾವಣೆ ವಾಸಿ ಶ್ರೀ ಆರ್. ಹಷೀತ್ ಆರ್ ಶಂಕರ್, ರವರು ಕೆಎ-46, ಕೆ-2108 ರಾಯಲ್ ಎನ್ಫೀಲ್ಡ್ ಬೈಕ್ನಲ್ಲಿ ಸ್ನೇಹಿತನಾದ ಶ್ರೀ ಪ್ರದೀಪನೊಂದಿಗೆ ಸಕಲೇಶಪುರ ತಾಲ್ಲೂಕು, ಹುಲ್ಲಹಳ್ಳಿ ಗ್ರಾಮದ ಹತ್ತಿರವಿರುವ ದೇವಸ್ಥಾನದ ಸ್ವಲ್ಪ ಹಿಂದೆ ಬೈಕ್ನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಎದುರುಗಡೆಯಿಂದ ಬಂದ ಕೆಎ-09,ಎಫ್-4899 ರ ಕೆಎಸ್ಆರ್ಟಿಸಿ ಬಸ್ಸಿಗೆ ಡಿಕ್ಕಿ ಮಾಡಿದ ಪರಿಣಾಮ ಶ್ರೀ ಹಷರ್ಿತ್, ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಸಕಲೇಶಪುರ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಶ್ರೀ ಹಷರ್ಿತ್ ಆರ್ ಶಂಕರ್ ಬಿನ್ ರವಿಶಂಕರ್, 28 ವರ್ಷ, ಮಹಾಲಕ್ಷ್ಮೀ ಬಡಾವಣೆ, ತುಮಕೂರು ರವರು ಮಾರ್ಗಮಧ್ಯೆ ಮೃತಪಟ್ಟಿರುತ್ತಾರೆಂದು ಹಾಗೂ ಗಾಯಗೊಂಡ ಶ್ರೀ ಪ್ರದೀಪ್, ರವರು ಜನಪ್ರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಪ್ರತ್ಯಕ್ಷದಶರ್ಿ ಶ್ರೀ ಮಲ್ಲಿನಾಥ್, ಕೆಎಸ್ಆರ್ಟಿಸಿ ಚಾಲಕ, ರವರು ಕೊಟ್ಟ ದೂರಿನ ಮೇರೆಗೆ ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

No comments: