* * * * * * HASSAN DISTRICT POLICE

Tuesday, October 10, 2017

PRESS NOTE : 10-10-2017

ಪ್ರಕಟಣೆ                                               ದಿನಾಂಕ: 10-10-2017
               
ಮಟ್ಕಾ-ಜೂಜಾಡುತ್ತಿದ್ದವನ ಇಬ್ಬರ ಬಂಧನ, ಬಂಧಿತರಿಂದ ಸುಮಾರು 1,820/- ನಗದು ವಶ:
            ದಿನಾಂಕ: 09-10-2017 ರಂದು ಮಧ್ಯಾಹ್ನ 3-30 ಗಂಟೆ ಸಮಯದಲ್ಲಿ ಹಾಸನದ ಮಟನ್ ಮಾರ್ಕೆಟ್ ಹತ್ತಿರ ಎ.ಪಿ. ಅಹಮ್ಮದ್ ಚಿಕನ್ ಸೆಂಟರ್ನ ಮುಂಭಾಗದಲ್ಲಿ ಸಾರ್ವಜನಿಕರ ಸ್ಥಳದಲ್ಲೇ ಮಟ್ಕಾ-ಜೂಜಾಟಾಡುತ್ತಿದ್ದಾರೆಂದು ಶ್ರೀ ಡಿ. ಸತೀಶ್, ಪಿಐ, ಸಿಇಎನ್, ಪೊಲೀಸ್ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಮಟ್ಕಾ-ಜೂಜಾಟಾಡುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಖಾಲಿಕ್ ಬಿನ್ ಲೇಟ್ ವಲ್ಲಿಸಾಬ್, 50 ವರ್ಷ, ಚಿಪ್ಪಿನಕಟ್ಟೆ ಹಾಸನ. 2) ಅಂಬ್ಲಿಬಾಬು, 50 ವರ್ಷ, ಟಿಪ್ಪುನಗರ, ಹಾಸನ ನಗರ ಎಂದು ತಿಳಿಸಿದ್ದವರನ್ನು  ದಸ್ತಗಿರಿ ಮಾಡಿಕೊಂಡು ಮಟ್ಕಾ-ಜೂಟಾಟದಲ್ಲಿ ಪಣಕ್ಕಿಟ್ಟಿದ್ದ ಸುಮಾರು 1,820/- ನಗದನ್ನು ಅಮಾನತ್ತುಪಡಿಸಿಕೊಂಡು ಹಾಸನ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.
ಹುಡುಗಿ ಕಾಣೆ
         ದಿನಾಂಕ: 09-10-2017  ರಂದು ಬೆಳ್ಳಿಗ್ಗೆ 9-30 ಗಂಟೆಗೆ ಬೇಲೂರು ಹಳೇಬೀಡು ವಾಸಿ ಶ್ರೀ ವೀರನಿಂಗಶೆಟ್ಟಿ, ರವರ ಮಗಳು ಕು|| ಡಿ. ತನು, ಹಳೇಬೀಡಿನ ಎಸ್ಜಿಆರ್ ಶಾಲೆಗೆ ಹೋಗುತ್ತೇನೆಂದು ಮನೆಯಲ್ಲಿ ಹೇಳಿ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ಡಿ. ತನುಳ ತಂದೆ ಶ್ರೀ ವೀರನಿಂಗಶೆಟ್ಟಿ, ರವರು ಕೊಟ್ಟ ದೂರಿನ ಮೇರೆಗೆ ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಕು|| ಡಿ. ತನು  ಬಿನ್ ವೀರನಿಂಗಶೆಟ್ಟಿ, 26 ವರ್ಷ, 5'3' ಅಡಿ ಎತ್ತರ, ದುಂಡುಮುಖ, ಎಣ್ಣೆಗೆಂಪು ಬಣ್ಣಸಾಧಾರಣ ಮೈಕಟ್ಟು, ಕನ್ನಡ, ಇಂಗ್ಲೀಷ್ ಮತ್ತು ಹಿಂದಿ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಕ್ರೀಮ್ ಬಣ್ಣದ ಚೂಡಿದಾರ ಧರಿಸಿರುತ್ತಾರೆ. ಈ ಹುಡುಗಿಯ ಸುಳಿವು ಸಕ್ಕಲ್ಲಿ 08177-273201 ಕ್ಕೆ ಸಂಪರ್ಕಿಸುವುದು 
ಮನುಷ್ಯ ಕಾಣೆ


        ದಿನಾಂಕ: 22-09-2017 ರಂದು ಬೆಳಿಗ್ಗೆ 9-00 ಗಂಟೆಗೆ ಹೊಳೆನರಸೀಪುರ ತಾಲ್ಲೂಕು, ಹಳ್ಳಿಮೈಸೂರು ಹೋಬಳಿ, ಟಿ. ಮಾಯಗೊಂಡನಹಳ್ಳಿ ಗ್ರಾಮದ ವಾಸಿ ಶ್ರೀ ಚಂದ್ರಶೇಖರಯ್ಯ, ರವರು ಮನೆಯಿಂದ ಹೊಳೆನರಸೀಪುರ ಆಸ್ಪತ್ರೆಗೆ ಹೋಗಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋದವರು ಇದುವರೆವಿಗೂ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀ ಚಂದ್ರಶೇಖರಯ್ಯ, ರವರ ಮಗ ಶ್ರೀ ಯೋಗೇಶ್, ರವರು ದಿನಾಂಕ: 09-10-2017 ರಂದು ಕೊಟ್ಟ ದೂರಿನ ಮೇರೆಗೆ ಹಳ್ಳಿಮೈಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ವ್ಯಕ್ತಿಯ ಚಹರೆ: ಶ್ರೀ ಚಂದ್ರಶೇಖರಯ್ಯ, 70 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧರಾಣಾ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾನೆ. ಮನೆಯಿಂದ ಹೋಗುವಾಗ ಬಿಳಿ ಶಟರ್್ ಮತ್ತು ಬಿಳಿ ಪಂಚೆ ಧರಿಸಿರುತ್ತಾರೆ. ಈ ವ್ಯಕ್ತಿಯ ಸುಳಿವು ಸಿಕ್ಕಲ್ಲಿ 08175-260100 ಕ್ಕೆ ಸಂಪರ್ಕಿಸುವುದು.

No comments: