* * * * * * HASSAN DISTRICT POLICE

Monday, October 9, 2017

PRESS NOTE : 09-10-2017

ಪತ್ರಿಕಾ ಪ್ರಕಟಣೆ             ದಿನಾಂಕ: 09-10-2017
ಮನುಷ್ಯ ಕಾಣೆ
           ದಿನಾಂಕ: 06-11-2016 ರಂದು ಬೆಳಿಗ್ಗೆ 9-00 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಶಾಂತಿಗ್ರಾಮ ಹೋಬಳಿ, ಬನವಾಸೆ ಗ್ರಾಮದ ವಾಸಿ ಶ್ರೀ ಬಿ.ಕೆ. ರಂಗನಾಥ, ರವರು ಹಿರೀಸಾವೆ ಮತ್ತು ಮೈಸೂರಿಗೆ ಮದುವೆ ಹೋಗಿ ಬರುವುದಾಗಿ ಮನೆಯಲ್ಲಿ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀ ಬಿ.ಕೆ. ರಂಗನಾಥ್ ರವರ ಪತ್ನಿ ಶ್ರೀಮತಿ ಪ್ರಭಾವತಿ, ರವರು ಕೊಟ್ಟ ದೂರಿನ ಮೇರೆಗೆ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ವ್ಯಕ್ತಿಯ ಚಹರೆ: ಶ್ರೀ ಬಿ.ಕೆ. ರಂಗನಾಥ, 65 ವರ್ಷ, 5'6' ಅಡಿ ಎತ್ತರ, ಬಿಳಿ ಬಣ್ಣ, ಉದ್ದಮುಖಎಣ್ಣೆಗೆಂಪು ಬಣ್ಣ, ಸಾಧರಾಣಾ ಮೈಕಟ್ಟು, ಕನ್ನಡ, ಹಿಂದಿ ಮತ್ತು ಇಂಗ್ಲೀಷ್ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಟೀ ಶಟರ್್ ಮತ್ತು ಕಪ್ಪು ಫ್ಯಾಂಟು ಧರಿಸಿರುತ್ತಾರೆ. ಈ ವ್ಯಕ್ತಿಯ ಸುಳಿವು ಸಿಕ್ಕಲ್ಲಿ 08172-258038 ಕ್ಕೆ ಸಂಪರ್ಕಿಸುವುದು.

ತಾಯಿ ಮಗುವಿನೊಂದಿಗೆ ಕಾಣೆ
       ದಿನಾಂಕ: 08-09-2017 ರಂದು ರಾತ್ರಿ 7-00 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ದೊಡ್ಡಮಂಡಿಗನಹಳ್ಳಿ ಗ್ರಾಮದ ಚಿಕ್ಕಮ್ಮ ದೇವಸ್ಥಾನದ ಹತ್ತಿರದ ವಾಸಿ ಶ್ರೀಮತಿ ಡಯಾನ ಮೇರಿ, ಮಗಳು ಕು|| ಇನಿಕಾಗಳೊಂದಿಗೆ ಮನೆಯಿಂದ ಹೊರಗೆ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀಮತಿ ಡಯಾನ ಮೇರಿ, ರವರ ಪತಿ ಶ್ರೀ ಚಾಲ್ಸರ್್ ಪೆರೇರಾ, ರವರು ಕೊಟ್ಟ ದೂರಿನ ಮೇರೆಗೆ ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹೆಂಗಸು ಮತ್ತು ಮಗುವಿನ ಚಹರೆ: ಶ್ರೀಮತಿ ಡಯಾನ ಮೇರಿ ಕೋಂ ಚಾಲ್ಸರ್್, 25 ವರ್ಷ, 5 ಅಡಿ ಎತ್ತರ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಹಸಿರು ಬಣ್ಣದ ಚೂಡಿದಾರ ಧರಿಸಿರುತ್ತಾರೆ. ಕು|| ಇನಿಕಾ, 3 ವರ್ಷ, ಎಣ್ಣೆಗೆಂಪು ಬಣ್ಣ, ಕೆಂಪು ಬಣ್ಣ ಬಟ್ಟೆ ಧರಿಸಿರುತ್ತೆ. ಈ ಹೆಂಗಸು ಮತ್ತು ಮಗುವಿನ ಸುಳಿವು ಸಿಕ್ಕಲ್ಲಿ 08172-268333 ಕ್ಕೆ ಸಂಪರ್ಕಿಸುವುದು.

No comments: