* * * * * * HASSAN DISTRICT POLICE

Monday, October 9, 2017

PRESS NOTE : 08-10-2017

ಪತ್ರಿಕಾ ಪ್ರಕಟಣೆ             ದಿನಾಂಕ: 08-10-2017

ಸಕಲೇಶಪುರ ತಾಲ್ಲೂಕಿನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ, ಬಂಧಿತರಿಂದ 6,358/- ಬೆಲೆಯ ಮದ್ಯ ವಶ

          ದಿನಾಂಕ: 07-10-2017 ರಂದು ಸಂಜೆ 05-00 ಗಂಟೆ ಸಮಯದಲ್ಲಿ  ಸಕಲೇಶಪುರ ತಾಲ್ಲೂಕು, ಯಸಳೂರು ಹೋಬಳಿ, ದೊಡ್ಡನಹಳ್ಳಿ ಗ್ರಾಮದಲ್ಲಿ  ಅಕ್ರಮವಾಗಿ ಮದ್ಯವನ್ನು ದಾಸ್ತಾನು ಮಾಡಿಕೊಂಡು ಮಾರಾಟ ಮಾಡುತ್ತಿದ್ದಾರೆಂದು ಪಿಐ ಶ್ರೀ ಡಿ. ಸತೀಶ್, ಸಿ.ಇ.ಎನ್. ಕ್ರೈಂ ಪೋಲೀಸ್ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಮದ್ಯ ಮಾರಾಟ ಮಾಡುತ್ತಿದ್ದವರ ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಧರ್ಮಪ್ಪ ಹೆಚ್.ಟಿ. ಬಿನ್ ಲೇಟ್ ತಮ್ಮೇಗೌಡ, 60 ವರ್ಷ, 2) ವಿಶ್ವನಾಥ ಲೇಟ್ ಸಿದ್ದೇಗೌಡ, 53 ವರ್ಷ, ದೊಡ್ಡನಹಳ್ಳಿ ಗ್ರಾಮ, ಯಸಳೂರು ಹೋಬಳಿ, ಸಕಲೇಶಪುರ ತಾಲ್ಲೂಕು ಎಂದು ತಿಳಿಸಿದವರನ್ನು ದಸ್ತಗಿರಿ ಮಾಡಿಕೊಂಡು ಅವರ ವಶದಲ್ಲಿದ್ದ 6358 /- ಬೆಲೆಯ ಮದ್ಯವನ್ನು  ಅಮಾನತ್ತುಪಡಿಸಿಕೊಂಡು  ಹಾಸನ ಸಿಇಎನ್  ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.
   
ಅಕ್ರಮವಾಗಿ ಮರಳು ಸಾಗಿಸುತ್ತಿದ್ದವನ ಬಂಧನ, ಮರಳು ಸಮೇತ ಪಿಕಪ್ ವಾಹನ ವಶ


         ದಿನಾಂಕ: 08-10-2017 ರಂದು ಬೆಳಿಗ್ಗೆ 05-30 ಗಂಟೆ ಸಮಯದಲ್ಲಿ ಸಕಲೇಶಪುರ ತಾಲ್ಲೂಕು, ಕಸಬಾ ಹೋಬಳಿ, ಇರಗಲು ಗ್ರಾಮದ ಹತ್ತಿರದಿಂದ ದೋಣಿಗಾಲ್ ಗ್ರಾಮದ ಕಡೆಗೆ ಅಕ್ರಮವಾಗಿ ಮರಳನ್ನು ಸಾಗಿಸುತ್ತಿದ್ದಾರೆಂದು ಸಿಪಿಐ ಶ್ರೀ ವೆಂಕಟೇಶ್, ಸಕಲೇಶಪುರ ವೃತ್ತ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಹೆಚ್.ಸಿ. 22, ಶ್ರೀ ಕುಮಾರಸ್ವಾಮಿ ಸಕಲೇಶಪುರ ನಗರ ಠಾಣೆ ರವರು ಸಿಬ್ಬಂದಿಯೊಂದಿಗೆ ಆನೆಮಹಲ್ ಗ್ರಾಮದ ಬಸ್ ನಿಲ್ದಾಣದ ಎದುರು ಬಿ.ಎಂ. ರಸ್ತೆಯಲ್ಲಿ ಹೋಗತ್ತಿದ್ದ ಕೆಎ-19-ಡಿ-2523 ಪಿಕಪ್ ವಾಹನವನ್ನು ತಡೆದು ಪರಿಶೀಲಿಸಲಾಗಿ ಯಾವುದೇ ಪರವಾನಗಿ ಇಲ್ಲದೆ ಸಕರ್ಾರಕ್ಕೆ ರಾಜದನವನ್ನು ಕಟ್ಟದೆ ಕಳ್ಳತನದಿಂದ ಮರಳನ್ನು ಸಾಗಿಸುತ್ತಿದ್ದವನ ಹಿಡಿದು ಹೆಸರು ವಿಳಾಸ ಕೇಳಲಾಗಿ ದಿನೇಶ್ ಬಿನ್ ಉಮೇಶ್, 27 ವರ್ಷ, ಇರಗಲು ಗ್ರಾಮ, ಕಸಬಾ ಹೋಬಳಿ, ಸಕಲೇಶಪುರ ತಾಲ್ಲೂಕು ಎಂದು ತಿಳಿಸಿದವನನ್ನು ದಸ್ತಗಿರಿ ಮಾಡಿಕೊಂಡು ಮರಳು ಸಮೇತ ವಾಹನವನ್ನು ಪಿಕಪ್ ವಾಹನವನ್ನು ಅಮಾನತ್ತುಪಡಿಸಿಕೊಂಡು ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ. 

No comments: