* * * * * * HASSAN DISTRICT POLICE

Friday, October 13, 2017

ಹಾಸನ ನಗರ ವೃತ್ತ ಪೊಲೀಸರ ಕಾರ್ಯಾಚರಣೆ ದ್ವಿಚಕ್ರ ಮತ್ತು ಮನೆಕಳ್ಳತನ ಮಾಡುತ್ತಿದ್ದ ಆರೋಪಿಗಳ ಬಂಧನ ಆರೋಪಿಗಳಿಂದ ಸುಮಾರು 5,25,800/-ರೂ ಮೌಲ್ಯದ 11 ದ್ವಿಚಕ್ರ ಮತ್ತು ಚಿನ್ನಾಭರಣಗಳ ವಶ

ಹಾಸನ ನಗರ ವೃತ್ತ ಪೊಲೀಸರ ಕಾರ್ಯಾಚರಣೆ ದ್ವಿಚಕ್ರ ಮತ್ತು ಮನೆಕಳ್ಳತನ ಮಾಡುತ್ತಿದ್ದ ಆರೋಪಿಗಳ ಬಂಧನ ಆರೋಪಿಗಳಿಂದ ಸುಮಾರು 5,25,800/-ರೂ ಮೌಲ್ಯದ 11 ದ್ವಿಚಕ್ರ ಮತ್ತು ಚಿನ್ನಾಭರಣಗಳ ವಶ
         
       ಹಾಸನ ನಗರದಲ್ಲಿ ಇತ್ತೀಚೆಗೆ ದ್ವಿಚಕ್ರ ವಾಹನಗಳು ಮತ್ತು ಹಗಲು ಮನೆ ಕಳವು ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದ್ದು, ಇದು ಸಾರ್ವಜನಿಕರಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿಸಿದ್ದು, ಈ ಸೂಕ್ಷ್ಮತೆಯನ್ನು ಅರಿತು ಈ ಪ್ರಕರಣಗಳ ಆರೋಪಿಗಳನ್ನು ಪತ್ತೆ ಮಾಡುವ ಸಂಬಂಧ ಹಾಸನ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಶ್ರೀ ರಾಹುಲ್ ಕುಮಾರ್ ಶಹಪುರ್ವಾಡ್, ಐ.ಪಿ.ಎಸ್, ಮತ್ತು ಅಪರ ಪೊಲೀಸ್ ಅಧೀಕ್ಷಕರಾದ ವಿ.ಎಂ.ಜ್ಯೋತಿ ರವರ ಮಾಗದರ್ಶನದಲ್ಲಿ, ಹಾಸನ ಉಪ ವಿಭಾಗದ ಡಿ.ವೈ.ಎಸ್.ಪಿ. ರವರಾದ ಶ್ರೀ ಶಶಿಧರ್ ರವರ ನೇತೃತ್ವದಲ್ಲಿ ಶ್ರೀ ವೈ. ಸತ್ಯನಾರಾಯಣ, ಸಿ.ಪಿ.ಐ, ಹಾಸನ ನಗರ ವೃತ್ತ ,ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯ ಪಿ.ಎಸ್.ಐ ಆರೋಕಿಯಪ್ಪ, ಬಡಾವಣೆ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ ಹರೀಶ್, ನಗರ ಪೊಲೀಸ್ ಠಾಣೆಯ ಪಿ.ಎಸ್.ಐ ಸುರೇಶ್ ಮತ್ತು  ಸಿಬ್ಬಂದಿಗಳಾದ ಮಲ್ಲಿಕಾಜರ್ುನ, ಗಣೇಶ್, ಎ.ಎಸ್.ಐ ಪುಟ್ಟಸ್ವಾಮಿ, ಜಮೀಲ್, ಪ್ರಸನ್ನ, ಗಿರೀಶ್, ಪ್ರದೀಪ, ರಘು, ಸೋಮಶೇಖರ, ಪ್ರವೀಣ, ಮಂಜುನಾಥ, ರವರನ್ನೊಳಗೊಂಡ ತಂಡವನ್ನು ರಚಿಸಲಾಗಿದ್ದು ಸದರಿ ತಂಡವು ಮಾಹಿತಿಯನ್ನು ಸಂಗ್ರಹಿಸಿ ಕಾಯರ್ಾಚರಣೆ ನಡೆಸಿ ಹಾಸನದಲ್ಲಿ ಅನುಮಾನಾಸ್ಪದವಾಗಿ ಮೋಟಾರ್ ಬೈಕಿನಲ್ಲಿ ಓಡಾಡುತ್ತಿದ್ದ 1) ಸುಹೀಲ್ ಪಾಷ ಬಿನ್ ಶಾಹಿನ್ ಪಾಷ 2) ದಯಾನಂದ @ ದಯಾ ಬಿನ್ ನಾಗರಾಜ 3) ಪಾಪಣ್ಣ ಬಿನ್ ರಾಜಯ್ಯ ಎಂಬ ಮೂವರು ಆರೋಪಿಗಳು ಹಾಸನ ನಗರದ ವಿವಿಧ ಬಡಾವಣೆಗಳಲ್ಲಿ ದ್ವಿಚಕ್ರ ವಾಹನ ಮತ್ತು ಹಗಲು ಮನೆ ಕಳ್ಳತನ ಮಾಡುತ್ತಿದ್ದವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ  ಆರೋಪಿಗಳಿಂದ  ಒಟ್ಟು 11 ದ್ವಿ ಚಕ್ರ ಕಳವು ಪ್ರಕರಣಗಳು ಮತ್ತು 5 ಹಗಲು ಮನೆ/ಅಂಗಡಿ ಕಳವು ಪ್ರಕರಣಗಳು ಪತ್ತೆಯಾಗಿದ್ದು  ಹಾಸನ ನಗರ ವೃತ್ತ  ವ್ಯಾಪ್ತಿಯ ಹಾಸನ ನಗರ ಪೊಲೀಸ್ ಠಾಣೆಯ ಸರಹದ್ದಿನಲ್ಲಿ-5, ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯ ಸರಹದ್ದಿನಲ್ಲಿ-2, ಬಡಾವಣೆ ಪೊಲೀಸ್ ಠಾಣೆಯ ಸರಹದ್ದಿನಲ್ಲಿ-4, ದ್ವಿಚಕ್ರ ವಾಹನ ಕಳವು ಪ್ರಕರಣಗಳು ಹಾಗೂ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯ ಸರಹದ್ದಿನಲ್ಲಿ-4, ಹಳೆಬೀಡು ಪೊಲೀಸ್ ಠಾಣೆಯ ಸರಹದ್ದಿನಲ್ಲಿ-1 ಹಗಲು ಮನೆ /ಅಂಗಡಿ ಕಳವು ಪ್ರಕರಣಗಳು ಪತ್ತೆಯಾಗಿರುತ್ತವೆ. ಆರೋಪಿಗಳು ನೀಡಿದ ಸುಳಿವಿನ ಮೇರೆಗೆ 3,16,000/- ರೂ ಮೌಲ್ಯದ  ದ್ವಿ ಚಕ್ರ ವಾಹನ ಹಾಗೂ 2,12,800/-  ರೂ ಮೌಲ್ಯದ 76 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ.


       ಈ ಮೇಲ್ಕಂಡ ಆರೋಪಿಗಳನ್ನು ಬಂಧಿಸಿ 5,25,800/-ರೂ ಮೌಲ್ಯದ 76 ಗ್ರಾಂ ತೂಕದ  ಚಿನ್ನಾಭರಣ ಮತ್ತು 11 ದ್ವಿ ಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಈ ಮೇಲ್ಕಂಡ ತನಿಖಾ ತಂಡದ ಕಾರ್ಯವನ್ನು ಪೊಲೀಸ್ ಅಧೀಕ್ಷಕರಾದ ಶ್ರೀ ರಾಹುಲ್ ಕುಮಾರ್ ಶಹಪುರವಾಡ್ ಐ.ಪಿ.ಎಸ್ ರವರು ಶ್ಲಾಘಿಸಿರುತ್ತಾರೆ.

No comments: